ಪ್ರಮುಖ ಸುದ್ದಿಮೈಸೂರು

ಸುತ್ತೂರು ಜಾತ್ರೆ ಪ್ರಯುಕ್ತ ದನಗಳ ಜಾತ್ರೆ

ಸುತ್ತೂರು ಶ್ರೀ ಶಿವರಾತ್ರಿ ಶಿವಯೋಗಿಗಳ ಜಾತ್ರಾ ಮಹೋತ್ಸವವು ಸುತ್ತೂರು ಕ್ಷೇತ್ರದಲ್ಲಿ ಬರುವ ಜನವರಿ 24 ರಿಂದ 29 ರ ವರೆಗೆ ಜರುಗಲಿದೆ.

ಜಾತ್ರಾ ಮಹೋತ್ಸವದ ಅಂಗವಾಗಿ 49ನೆ ದನಗಳ ಜಾತ್ರೆಯನ್ನು ವ್ಯವಸ‍್ಥೆ ಮಾಡಲಾಗಿದೆ. ಪಾಲ್ಗೊಳ್ಳುವ ಜಾನುವಾರುಗಳಿಗೆ ತಂಗುವುದಕ್ಕೆ ಉತ್ತಮ ವ್ಯವಸ್ಥೆ ಇರಲಿದೆ. ಜಾತ್ರೆಯಲ್ಲಿ ರೈತರು ಜಾನುವಾರುಗಳನ್ನು ಕೊಳ್ಳಲು ಮತ್ತು ಮಾರಲು ವ್ಯವಸ್ಥೆ ಇರುತ್ತದೆ. ಉತ್ತಮ ರಾಸುಗಳಿಗೆ ಆಕರ್ಷಕ ನಗದು ಬಹುಮಾನಗಳನ್ನು ನೀಡಲಾಗುವುದು. ಪಶುಪಾಲನಾ ಇಲಾಖೆ ಹಾಗೂ ಪಶುವೈದ್ಯಕೀಯ ಇಲಾಖೆಗಳಿಂದ ದನಗಳಿಗೆ ಉಚಿತ ಆರೋಗ್ಯ ತಪಾಸಣೆ, ಚುಚ್ಚುಮದ್ದು ಮತ್ತು ಜಂತುಹುಳು ನಿವಾರಕ ಔಷಧಿ ನೀಡಿಕೆಯನ್ನು ಹಮ್ಮಿಕೊಳ್ಳಲಾಗಿದೆ. ಎಲ್ಲ ದಿನಗಳಲ್ಲೂ ಪ್ರಸಾದ ವ್ಯವಸ್ಥೆ ಇರುತ್ತದೆ. ರಾಸುಗಳನ್ನು ಕಟ್ಟಲು ಮುಂಚಿತವಾಗಿ ಜಾಗವನ್ನು ಕಾಯ್ದಿರಿಸಬಹುದಾಗಿದೆ. ರೈತಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ರಾಸುಗಳೊಡನೆ ಆಗಮಿಸಿ, ಸದುಪಯೋಗ ಪಡೆದುಕೊಳ್ಳಬೇಕೆಂದು ಕೋರಲಾಗಿದೆ.

ಹೆಚ್ಚಿನ ಮಾಹಿತಿಗೆ ಸಂಚಾಲಕರಾದ ಎಚ್‍.ಎನ್. ನಂಜಪ್ಪ 9845246023 ಹಾಗೂ ಬಿ.ಎಂ. ಸಿದ್ದಪ್ಪ 9686677590 ಅವರುಗಳನ್ನು ದೂರವಾಣಿಯಲ್ಲಿ ಅಥವಾ ಜಾತ್ರಾ ಮಹೋತ್ಸವ ಕಾರ್ಯಾಲಯದಲ್ಲಿ ನೇರವಾಗಿ ಅಥವಾ 08221-232054 ಮತ್ತು 0821-2548212 ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದು.

Leave a Reply

comments

Related Articles

error: