ಮೈಸೂರು

ರಾಹುಲ್ ಗಾಂಧಿ ಸಮಾವೇಶಕ್ಕೆ ತೆರಳಿದ್ದ ವೃದ್ಧ ನಾಪತ್ತೆ : ಕಾಂಗ್ರೆಸ್ ಪಕ್ಷದ ಮುಖಂಡರ ವಿರುದ್ಧ ದೂರು ದಾಖಲು

ಮೈಸೂರು,ಏ.14:- ರಾಹುಲ್ ಗಾಂಧಿ ಸಮಾವೇಶಕ್ಕೆ ತೆರಳಿದ್ದ  ವೃದ್ಧರೋರ್ವರು  ನಾಪತ್ತೆಯಾಗಿದ್ದು,ಕವಲಂದೆ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದೆ.

ವರುಣಾ ವಿಧಾನಸಭಾ ಕ್ಷೇತ್ರದ ಕೋಣನೂರು ಗ್ರಾಮದ ರಂಗ ದಾಸಯ್ಯ ಎಂಬವರೇ ನಾಪತ್ತೆಯಾದ ವೃದ್ಧರಾಗಿದ್ದು, ಮೈಸೂರಿನಲ್ಲಿ ರಾಹುಲ್ ಗಾಂಧಿ ಸಮಾವೇಶ ನಡೆದು ತಿಂಗಳು ಕಳೆಯುತ್ತ ಬಂದರೂ ಮನೆಗೆ ಬಂದಿಲ್ಲ ಎಂದು ರಂಗದಾಸಯ್ಯನವರ ಕುಟುಂಬ  ಆತಂಕ ವ್ಯಕ್ತಪಡಿಸಿದೆ. ಇವರು ಮಾರ್ಚ್ 25ರಂದು ಕೋಣನೂರು ಗ್ರಾಮದಿಂದ  ಮೈಸೂರಿನಲ್ಲಿ ಜರುಗಿದ ರಾಹುಲ್ ಗಾಂಧಿ ಅವರ ಜನಾಶೀರ್ವಾದ ಯಾತ್ರೆ ಸಮಾವೇಶಕ್ಕಾಗಿ  ಬಸ್ ನಲ್ಲಿ ತೆರಳಿದ್ದರು. ರಾಹುಲ್ ಗಾಂಧಿ ಸಮಾವೇಶಕ್ಕೆ ಮೈಸೂರಿಗೆ ಆಗಮಿಸಿದರೆ ಉಚಿತ ಊಟ, ಉಚಿತ ಬಸ್ಸಿನ ವ್ಯವಸ್ಥೆ ಹಾಗೂ 200ರೂ  ನೀಡುವುದಾಗಿ ಆಮಿಷ ಒಡ್ಡಿ ರಾಹುಲ್ ಗಾಂಧಿ  ಸಮಾವೇಶಕ್ಕೆ ರಂಗದಾಸಯ್ಯನವರನ್ನು ಕಾಂಗ್ರೆಸ್ ಪಕ್ಷದ ಕೆಲವು ಮುಖಂಡರು ಕರೆದೊಯ್ದಿದ್ದರು. ಮುಖಂಡರ  ವಿರುದ್ಧ  ನಾಪತ್ತೆಯಾಗಿರುವ ರಂಗ ದಾಸಯ್ಯನ ಮಗ ಕುಮಾರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸಮಾವೇಶ ಮುಗಿಸಿಕೊಂಡು ರಾತ್ರಿ ಊರಿಗೆ ಎಲ್ಲರೂ ಮರಳಿದರಾದರೂ ರಂಗದಾಸಯ್ಯ ವಾಪಸ್ಸು ಮನೆಗೆ ಹಿಂದಿರುಗಿಲ್ಲ. ಹಾಗಾಗಿ ಸಮಾವೇಶಕ್ಕೆ ಕರೆದುಕೊಂಡು ಹೋಗಿದ್ದ ಕಾಂಗ್ರೆಸ್ ಪಕ್ಷದ ಕೆಲವು ಮುಖಂಡರ ವಿರುದ್ಧ  ಕವಲಂದೆ ಪೊಲೀಸ್ ಠಾಣೆಗೆ   ದೂರು ನೀಡಲಾಗಿದೆ ಎಂದು ಕುಮಾರ್ ತಿಳಿಸಿದ್ದಾರೆ. ಮುಖಂಡರ ವಿರುದ್ಧ  ಕವಲಂದೆ ಪೊಲೀಸ್ ಠಾಣೆಗೆ   ದೂರು ನೀಡಲಾಗಿದೆ. ಜತೆಗೆ ಸಮಾವೇಶಕ್ಕೆ ಕರೆದೊಯ್ದಿದ್ದ ಪುಟ್ಟರಂಗಯ್ಯ,ಲಿಂಗರಾಜು, ಸೂಡಯ್ಯ  ಹಾಗೂ ನಾಗ ಎಂಬವರ ವಿರುದ್ಧ ದೂರು ದಾಖಲಿಸಲಾಗಿದ್ದು, ನಾಲ್ವರನ್ನು ಕವಲಂದೆ ಪೊಲೀಸ್ ಠಾಣೆಗೆ ಕರೆಸಿ ವಿಚಾರಣೆ ನಡೆಸಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: