ಮೈಸೂರು

ಆಶ್ರಯ ವಸತಿ ಯೋಜನೆ ಮನೆಗಳು ಅರ್ಹ ಫಲಾನುಭವಿಗಳಿಗೆ ಸಿಗಲು ಸೂಕ್ತ ಕ್ರಮ : ಜಿ.ಟಿ. ದೇವೇಗೌಡ

ಆಶ್ರಯ ವಸತಿ ಯೋಜನೆಯಡಿ ನಿರ್ಮಾಣಗೊಂಡಿರುವ ಮನೆಗಳು ಅರ್ಹ ಫಲಾನುಭವಿಗಳಿಗೆ ಸಿಗಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ತಿಳಿಸಿದರು.

ಮೈಸೂರಿನ ಮಹಾನಗರಪಾಲಿಕೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿ.ಟಿ.ದೇವೇಗೌಡ ಕೆಲವರು ಆಶ್ರಯ ಮನೆಗಳನ್ನು ಪಡೆದು ಅದನ್ನು ಬಾಡಿಗೆ ನೀಡಿದ್ದಾರೆ. ಇನ್ಕೆಲವರು ಅದನ್ನು ಮಾರಾಟ ಮಾಡಿದ್ದಾರೆ ಎನ್ನುವ ಮಾಹಿತಿಗಳು ಲಭ್ಯವಾಗಿವೆ. ಅವುಗಳನ್ನು ರದ್ದುಗೊಳಿಸಿ  ಸೂರು ಅವಶ್ಯವಿರುವ ಅರ್ಹ ಫಲಾನುಭವಿಗಳಿಗೆ ದೊರಕುವಂತಾಗಲು ಸಮಿತಿಯನ್ನು ರಚಿಸಲಾಗಿದ್ದು ಶುಕ್ರವಾರದಿಂದಲೇ ಅವರು ಸರ್ವೆ ನಡೆಸಲಿದ್ದಾರೆ ಎಂದರು. ಕ್ಷೇತ್ರದ ಶಾಸಕರು, ಅಲ್ಲಿನ ಕಾರ್ಪೊರೇಟರ್, ಮುಡಾ ಆಯುಕ್ತರು, ಮನಪಾ ಮೇಯರ್ ಗಳನ್ನು ಸಮಿತಿ ಒಳಗೊಳ್ಳಲಿದ್ದು, ಸರ್ವೆ ನಡೆಸಲಿದ್ದಾರೆ ಎಂದು ತಿಳಿಸಿದರು.

ಮೈಸೂರಿನ ಚಾಮುಂಡೇಶ್ವರಿ ವಿಧಾನ ಸಭಾ ಕ್ಷೇತ್ರದಲ್ಲಿ ಆಶ್ರಯ ವಸತಿ ಯೋಜನೆಯಡಿಯಲ್ಲಿ 2001-02 ಸಾಲಿನಲ್ಲಿ ಗೊರೂರು ಬಡಾವಣೆಯಲ್ಲಿ 1000ಮನೆಗಳನ್ನು ನಿರ್ಮಿಸುವ ಗುರಿ ಹೊಂದಲಾಗಿದ್ದು, 290 ಮನೆಗಳು ಪೂರ್ಣಗೊಂಡಿದ್ದು, ಫಲಾನುಭವಿಗಳಿಗೆ ವಿತರಿಸಲಾಗಿದೆ. ಶ್ಯಾದನಹಳ್ಳಿಯಲ್ಲಿ 290 ನಿವೇಶನಗಳನ್ನು ನಿರ್ಮಿಸುವ ಗುರಿ ಹೊಂದಲಾಗಿದ್ದು, 290 ನಿವೇಶನಗಳನ್ನು ರಚಿಸಲಾಗಿದ್ದು, ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ. ಹಕ್ಕು ಪತ್ರಗಳನ್ನು ನೀಡಬೇಕಾಗಿರುತ್ತದೆ ಎಂದರು.

ಭೂಗತಗಳ್ಳಿಯಲ್ಲಿ 150 ನಿವೇಶನಗಳ ಗುರಿ, 150 ನಿವೇಶನಗಳಿಗೆ ಸಂಬಂಧಿಸಿದಂತೆ ಫಲಾನುಭವಿಗಳಿಗೆ ಹಕ್ಕುಪತ್ರಗಳನ್ನು ನೋಂದಾಯಿಸಿ ನೀಡಲಾಗಿದೆ. ಹಾಗೂ ಸದರಿ ಬಡಾವಣೆಯಲ್ಲಿ ಕಲ್ಲು ನೆಡಲು ಕ್ರಮ ವಹಿಸಲಾಗುತ್ತಿದೆ ಎಂದು ತಿಳಿಸಿದರು.

2003-04ನೇ ಸಾಲಿನಲ್ಲಿ ಮಂಡಕಳ್ಳಿಯಲ್ಲಿ 1025ಮನೆಗಳ ಗುರಿ ಹೊಂದಿದ್ದು, 2446(ಜಿ+1 ಮತ್ತು 2ಮಾದರಿ ಮನೆಗಳು ) ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಆವಾಸ್ ಯೋಜನೆಯ ವಿಭಾಗದಡಿ ನಿರ್ಮಿಸಲು ಶ್ರಮವಹಿಸಲಾಗುತ್ತಿದೆ. 8 ಜುಲೈ 2016ರಂದು ಬೆಂಗಳೂರಿನ ವಿಕಾಸ ಸೌಧದಲ್ಲಿ ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮದವರು ನಡೆಸಿದ ಸಭೆಯಲ್ಲಿ 2446ಮನೆಗಳನ್ನು ನಿರ್ಮಿಸುವ ಸಂಬಂಧ ಡಿ.ಪಿ.ಆರ್ ಅನ್ನು ಮೈಸೂರು ನಿರ್ಮಿತಿ ಕೇಂದ್ರದವರಿಂದ ಸಿದ್ಧಪಡಿಸಿ ಸರ್ವೆ ನಂ.167/3, 168/2, 151/1, 170 ಮತ್ತು 302 ಒಟ್ಟು 40.32 ½ ಎಕರೆ ಜಮೀನು ಲಭ್ಯವಿರುತ್ತದೆ.

ಘೋಷ್ವಾರೆಯಲ್ಲಿ ಒಟ್ಟು 290 ಮನೆ, 440ನಿವೇಶನಗಳನ್ನು ಕಟ್ಟಬೇಕಾಗಿದೆ.  2446 ವಂತಿಕೆ ಪಾವತಿಸಬೇಕಾದವರಿದ್ದಾರೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮೇಯರ್ ಬಿ.ಎಲ್.ಭೈರಪ್ಪ ಸೇರಿದಂತೆ ಪಾಲಿಕೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

comments

Related Articles

error: