ಸುದ್ದಿ ಸಂಕ್ಷಿಪ್ತ

ನಾಳೆ ಕಡ್ಡಾಯ ಮತದಾನ ಜಾಗೃತಿ ಸಮಾವೇಶ

ಮೈಸೂರು,ಏ.15 : ಭಾರತೀಯ ಸಾಂಸ್ಕೃತಿಕ ವಿಕಾಸ ವೇದಿಕೆ, ಜಿಲ್ಲಾ ಪಂಚಾಯತ್, ರಾಜ್ಯ ಪರಿಸರ ಜಾಗೃತಿ ವೇದಿಕೆ ಇತರೆ ಸಂಘಟನೆಗಳ ಸಹಯೋಗದಲ್ಲಿ ಕಡ್ಡಾಯ ಮತದಾನ ಜಾಗೃತಿ ಸಮಾವೇಶ ಮತ್ತು ಎಂ.ಎ.ಮುತ್ತಮ್ಮ ಅವರ ಭರತನಾಟ್ಯ ಕಾರ್ಯಕ್ರಮವನ್ನು ಏ.15ರ ಸಂಜೆ 5.30ಕ್ಕೆ ಜಗನ್ಮೋಹನ ಅರಮನೆಯಲ್ಲಿ ಆಯೋಜಿಸಲಾಗಿದೆ.

ಡಾ.ಭಾಷ್ಯಂ ಸ್ವಾಮೀಜಿ, ಜ್ಞಾನ ಪ್ರಕಾಶ ಸ್ವಾಮೀಜಿ, ಮೋಸ್ಟ್ ರೆವರೆಂಡ್ ಕೆ.ಎ.ವಿಲಿಯಂ ಸಾನಿಧ್ಯ ಇರುವರು. ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಉದ್ಘಾಟಿಸುವರು, ಜಿ.ಪಂ. ಸಿಇಓ ಪಿ.ಶಿವಶಂಕರ್ ಇರುವರು, ಸಮಾಜಸೇವಕ ರಘುರಾಮಯ್ಯ ವಾಜಪೇಯಿ ಅಧ್ಯಕ್ಷತೆ ವಹಿಸುವರು. ಸಂಸ್ಕೃತ ವಿವಿಯ ಕುಲಪತಿ ಡಾ.ಪದ್ಮಶೇಖರ್, ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಕೆ.ದೀಪಕ್ ಮತ್ತಿತರರು ಇರುವರು. (ಕೆ.ಎಂ.ಆರ್)

Leave a Reply

comments

Related Articles

error: