ಕ್ರೀಡೆಪ್ರಮುಖ ಸುದ್ದಿ

ಕಾಮನ್ ವೆಲ್ತ್ ಕ್ರೀಡಾಕೂಟ: ಭಾರತಕ್ಕೆ ಮತ್ತೊಂದು ಚಿನ್ನ ತಂದುಕೊಟ್ಟ ಮಾನಿಕಾ ಬಾತ್ರಾ

ಗೋಲ್ಡ್ ಕೋಸ್ಟ್,ಏ.14-ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಭಾರತದ ಕ್ರೀಡಾಪಟುಗಳು ಅದ್ಭುತ ಪ್ರದರ್ಶನ ತೋರುತ್ತಿದ್ದಾರೆ. ಅದರಂತೆ ಕ್ರೀಡಾಕೂಟದ 10ನೇ ದಿನವಾದ ಶನಿವಾರ ಭಾರತೀಯ ಕ್ರೀಡಾಪಟುಗಳು ಭರ್ಜರಿಯಾಗಿ ಪದಕ ಬೇಟೆಯಾಡುತ್ತಿದ್ದಾರೆ.

ಮಹಿಳೆಯರ ಸಿಂಗಲ್ಸ್ ಟೇಬಲ್ ಟೆನ್ನಿಸ್ ನಲ್ಲಿ ಭಾರತದ ಮಾನಿಕಾ ಬಾತ್ರಾ ಚಿನ್ನ ಪದಕ ಜಯಿಸಿದ್ದಾರೆ. ಫೈನಲ್ಸ್ ನಲ್ಲಿ ಸಿಂಗಾಪುರದ ಮೆಂಗ್ಯು ಯು ಅವರನ್ನು 11-7, 11-6, 11-2, 11-7 ನೇರ ಸೆಟ್ ಗಳಿಂದ ಸೋಲಿಸಿದ ಮಾನಿಕಾ ಚಿನ್ನದ ಪದಕಕ್ಕೆ ಕೊರಳೊಡ್ಡಿದರು.

ಇದರೊಂದಿಗೆ ಭಾರತ 25 ಚಿನ್ನ, 14 ಬೆಳ್ಳಿ, 18 ಕಂಚು ಜಯಿಸಿ 57 ಪದಕಗಳನ್ನು ಪಡೆದುಕೊಂಡು ಮೂರನೇ ಸ್ಥಾನದಲ್ಲಿದೆ. (ಎಂ.ಎನ್)

Leave a Reply

comments

Related Articles

error: