ದೇಶ

ವೇತನ ಪಡೆಯಲು ಬ್ಯಾಂಕು ಮುಂದೆ ಮತ್ತೆ ಕ್ಯೂ: ಪರಿಸ್ಥಿತಿ ನಿಭಾಯಿಸಲು ಆರ್‍ಬಿಐ ಸಿದ್ಧ

ತಿಂಗಳ ಮೊದಲ ವಾರದಲ್ಲಿ ಉದ್ಯೋಗಿಗಳಿಗೆ ವೇತನ ಸಿಗುವ ವಾರ. ಈ ವಾರದಲ್ಲಿ ಅನೇಕ ಬಿಲ್ ಪಾವತಿ ಮಾಡಬೇಕು. ಹಣಕಾಸಿನ ವ್ಯವಹಾರವೂ ಹೆಚ್ಚಿರುತ್ತದೆ. ಆದರೆ, ಇನ್ನೂ ಕೂಡ ಕೆಲ ಎಟಿಎಂಗಳಲ್ಲಿ ಹಣ ಸಿಗುತ್ತಿಲ್ಲ. ವೇತನ ಸಿಗುವ ಈ ಸಮಯದಲ್ಲಿ ಬ್ಯಾಂಕ್‍ಗಳ ಮುಂದೆ ಜನದಟ್ಟಣೆ ಹೆಚ್ಚುವ ಸಾಧ್ಯತೆಯಿದ್ದು, ಮುಂದಿನ 10 ದಿನಗಳವರೆಗೆ ಬ್ಯಾಂಕ್‍ಗಳಿಗೆ ಪೊಲೀಸ್ ಭದ್ರತೆ ನೀಡಬೇಕೆಂದು ಅಖಿಲ ಭಾರತ ಬ್ಯಾಂಕ್ ನೌಕರರ ಒಕ್ಕೂಟ ಕೋರಿದೆ.

500 ಮತ್ತು 1000 ರೂ. ನೋಟುಗಳನ್ನು ನಿಷೇಧ ಮಾಡಿದ ಬಳಿಕ ಮೊದಲ ವೇತನದ ದಿನ ಬಂದಿದೆ. ವೇತನ ಬಂದ ಬಳಿಕ ಮನೆ ಬಾಡಿಗೆ, ಮಕ್ಕಳ ಶಾಲಾ ಶುಲಕ್ ಪಾವತಿ, ದಿನಸಿ ಖರೀದಿ ವ್ಯವಹಾರಗಳಿಗೆ ನಗದು ಹಣದ ಅಗತ್ಯವಿದೆ. ಹಾಗಾಗಿ ಪ್ರತಿಯೊಬ್ಬರೂ ನಗದು ಹಣಕ್ಕಾಗಿ ಬ್ಯಾಂಕಿಗೆ ಧಾವಿಸಲಿದ್ದು, ಬ್ಯಾಂಕಿನಲ್ಲಿ ಮತ್ತೆ ಜನಸಂದಣಿ ಏರ್ಪಡಲಿದೆ. ಹಣ ಸಿಗದೆ ಗೊಂದಲಕ್ಕೀಡಾದ ಜನರು ಬ್ಯಾಂಕುಗಳ ಬಾಗಿಲನ್ನು ಮುಚ್ಚುತ್ತಿರುವ ಪ್ರಕರಣಗಳು ಬಿಹಾರ, ಉತ್ತರಪ್ರದೇಶ, ತಮಿಳುನಾಡು ಮೊದಲಾದ ಕಡೆ ನಡೆದಿದೆ.

ಬ್ಯಾಂಕಗಳಲ್ಲಿ ಕ್ಯೂ ನಿಂತು ಆಗಮಿಸುವ ಗ್ರಾಹಕರಿಗೆ ಹಣ ಪೂರೈಸುವ ಜೊಣೆ ಬ್ಯಾಂಕ್ ಸಿಬ್ಬಂದಿ ಮೇಲಿದೆ. ಒಂದು ವೇಳೆ ಹಣ ಮುಗಿಯುತು ಎಂದಾದಲ್ಲಿ ಕ್ಯೂನಲ್ಲಿ ನಿಂತಿರುವವರನ್ನು ಹೇಗೆ ಸಂಭಾಳಿಸಬೇಕೆಂಬುದು ಬ್ಯಾಂಕ್ ಸಿಬ್ಬಂದಿಗೆ ದೊಡ್ಡ ತಲೆನೋವಾಗಿದೆ.

ಈ ಹಿನ್ನೆಲೆಯಲ್ಲಿ ಆರ್‍ಬಿಐ ಸಾಕಷ್ಟು ಪೂರ್ವ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ದೇಶದಲ್ಲಿ ನಗದಿಗೆ ಕೊರತೆಯಿಲ್ಲ. ಜನ ಭಯಪಡಬೇಕಾದ ಅಗತ್ಯವಿಲ್ಲ ಎಂದು ಭರವಸೆ ನೀಡಿದೆ. ವೇತನ ಖಾತೆ ಹೊಂದಿರುವ ಬ್ಯಾಂಕ್‍ಗಳಿಗೆ ಅಗತ್ಯಕ್ಕಿಂತ ಶೇ.20ರಿಂದ 30ರಷ್ಟು ಹೆಚ್ಚುವರಿ ನಗದನ್ನು ಡಿ.7ವರೆಗೆ ಪೂರೈಸಲಾಗುತ್ತದೆ. ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತದೆ. 500 ರೂ. ಮುಖಬೆಲೆಯ ನೋಟುಗಳಿಗೆ ಹೆಚ್ಚಿನ ಬೇಡಿಕೆ ಇರುವುದರಿಂದ ಈ ನೋಟುಗಳ ಮುದ್ರಣವನ್ನು ಹೆಚ್ಚಿಸಲಾಗಿದ್ದು, ಬುಧವಾರದಿಂದಲೇ ಎಲ್ಲ ಬ್ಯಾಂಕುಗಳಿಗೂ ತಲುಪುವಂತೆ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಆರ್‍ಬಿಐ ತಿಳಿಸಿದೆ.

Leave a Reply

comments

Related Articles

error: