ಮೈಸೂರು

ಫಿದೆಲ್ ಕ್ಯಾಸ್ಟ್ರೊ ಜೀವನ ಜಗತ್ತಿಗೆ ಮಾದರಿ: ಸಿಪಿಐ ಬಣ್ಣನೆ

ಕ್ಯೂಬಾದ ಕ್ರಾಂತಿಕಾರಿ ನಾಯಕ ಫಿದೆಲ್ ಕ್ಯಾಸ್ಟ್ರೋ ಅವರ ನಿಧನದಿಂದ ಜಗತ್ತಿನ ಕಮ್ಯುನಿಸ್ಟ್ ಚಿಂತನೆಯ ಓರ್ವ ಶ್ರೇಷ್ಠ ವ್ಯಕ್ತಿಯನ್ನು ಜಗತ್ತು ಕಳೆದುಕೊಂಡಂತಾಗಿದೆ ಎಂದು ಭಾರತ ಕಮ್ಯುನಿಷ್ಟ್ ಪಕ್ಷ ಸಂತಾಪ ವ್ಯಕ್ತಪಡಿಸಿದೆ.

ಕ್ಯಾಸ್ಟ್ರೋ ಅವರು ಕ್ಯೂಬಾದ ಅಪ್ರತಿಮ ನಾಯಕ. ಬಂಡವಾಳಶಾಹಿ ವ್ಯವಸ್ಥೆ ಹಾಗೂ ಸರ್ವಾಧಿಕಾರಿ ಧೋರಣೆಯ ವಿರುದ್ಧ ಅವರು ನಡೆಸಿದ ಹೋರಾಟವನ್ನು ಎಂದಿಗೂ ಮರೆಯಲಾಗದು. ಸರ್ವಾಧಿಕಾರಿ ಬಟೆಸ್ಟಾ ಅಧಿಕಾರವನ್ನು ಕೊನೆಗೊಳಿಸಿದ ಕ್ಯಾಸ್ಟ್ರೊ ಅವರು ಕ್ಯೂಬಾ ದೇಶದ ಅಪಾರ ಜನಬೆಂಬಲವನ್ನು ಜೀವನದ ಕೊನೆ ಗಳಿಗೆವರೆಗೂ ಉಳಿಸಿಕೊಂಡಿದ್ದರು ಎಂದು ಅವರ ಸಾಧನೆಯನ್ನು ಸಿಪಿಐ ಬಣ್ಣಿಸಿದೆ.

ಪುಟ್ಟ ರಾಷ್ಟ್ರವಾದ ಕ್ಯೂಬಾದಲ್ಲಿ ಅಮೆರಿಕದ ಸತತ ದಾಳಿಯನ್ನು ಎದುರಿಸಿ ಎಲ್ಲ ಜನರಿಗೂ ಮೂಲಸೌಕರ್ಯ, ಶಿಕ್ಷಣ ಉದ್ಯೋಗ ನೀಡಿ ವೈಭವ-ಆಡಂಬರವಿಲ್ಲದ ನೆಮ್ಮದಿಯ ಜೀವನ ನಡೆಸಲು ವ್ಯವಸ್ಥೆ ರೂಪಿಸಿಕೊಟ್ಟ ಕ್ಯಾಸ್ಟ್ರೋ ಅವರು ಜಗತ್ತಿನ ಎಲ್ಲ ರಾಷ್ಟ್ರಗಳಿಗೂ ಮಾದರಿ. ಯಾವುದೇ ಸಂಚುಗಳಿಗೆ ಬೆದರದೆ ಸೈಂದ್ಧಾಂತಿಕ ರಾಜಿ ಮಾಡಿಕೊಳ್ಳದ ಅವರ ಜೀವನ ನಮಗೆ ಮಾರ್ಗದರ್ಶಿ ಎಂದು ಸಿಪಿಐ ಹಾಗೂ ಎಐಸಿಟಿಯು ಜಿಲ್ಲಾ ಮಂಡಳಿಯು ಇತ್ತೀಚೆಗೆ ಏರ್ಪಡಿಸಿದ್ದ ಸಂತಾಪ ಸೂಚಕ ಸಭೆಯಲ್ಲಿ ಕ್ಯಾಸ್ಟ್ರೋ ಅವರನ್ನು ಸ್ಮರಿಸಲಾಯಿತು.

Leave a Reply

comments

Related Articles

error: