ಕರ್ನಾಟಕ

ತಾಳವಾಡಿ ಮಣೆಗಾರ್ ಪುಟ್ಟಸ್ವಾಮಿ ನಿಧನ

ರಾಜ್ಯ(ಚಾಮರಾಜನಗರ) ಏ.16:- ತಾಳವಾಡಿ ಮಣೆಗಾರ್ ಆರ್.ಪುಟ್ಟಸ್ವಾಮಿ ಅವರು ಭಾನುವಾರ ತಾಳವಾಡಿಯ ಸ್ವಗೃಹದಲ್ಲಿ ನಿಧನರಾದರು.

ಇವರು ತಾಳವಾಡಿ ಮಾರಮ್ಮ ದೇವಸ್ಥಾನದ ಧರ್ಮದರ್ಶಿಗಳಾಗಿದ್ದರು. ಮತ್ತು ಬ್ರಾಹ್ಮಣ ಸಂಘದ ಸದಸ್ಯರಾಗಿದ್ದರು. ಮೃತರು ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ. ನಿಧನರಾದ ಪುಟ್ಟಸ್ವಾಮಿ ಯವರ ಅಂತ್ಯಕ್ರಿಯೆ ತಾಳವಾಡಿಯ ರುದ್ರಭೂಮಿಯಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಇವರ ನಿಧನಕ್ಕೆ ಚಾಮರಾಜನಗರ ಬ್ರಾಹ್ಮಣ ಸಂಘದ ಅಧ್ಯಕ್ಷರು ಹಾಗೂ ತಾಳವಾಡಿ ವಿಪ್ರ ಬಾಂಧವರು ಸಂತಾಪ ವ್ಯಕ್ತ ಪಡಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: