ಮೈಸೂರು

ಕರ್ನಾಟಕ ರಾಜ್ಯ ಕ್ರಿಕೆಟ್ ಅಕಾಡೆಮಿ: 14 ವರ್ಷದೊಳಗಿನ ಬಾಲಕರ ಜಿಲ್ಲಾ ಮಟ್ಟದ ತಂಡಕ್ಕೆ ನಡೆದಿದೆ ಆಯ್ಕೆ

ಮೈಸೂರು,ಏ.16-ಕರ್ನಾಟಕ ರಾಜ್ಯ ಕ್ರಿಕೆಟ್ ಅಕಾಡೆಮಿ (ಕೆಎಸ್ ಸಿಎ) ವತಿಯಿಂದ ಸೋಮವಾರ ಮಾನಸಗಂಗೋತ್ರಿಯಲ್ಲಿರುವ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಕ್ರೀಡಾಂಗಣದಲ್ಲಿ 14 ವರ್ಷದೊಳಗಿನ ಬಾಲಕರ ಜಿಲ್ಲಾ ಮಟ್ಟದ ತಂಡಕ್ಕಾಗಿ ಆಯ್ಕೆ ಪ್ರಕ್ರಿಯೆ ನಡೆಯಿತು.

ಕಂಬೈನ್ಡ್ 11, ಕನ್ವೆನರ್ 11, ಛೇರ್ಮನ್ 11 ಎಂಬ ಮೂರು ತಂಡಗಳಿಗಾಗಿ 45 ಮಕ್ಕಳನ್ನು ಕೆಎಸ್ ಸಿಎ ಆಯ್ಕೆ ಮಾಡಲಿದೆ. ಅಲ್ಲದೆ, ಮಂಡ್ಯ, ಚಾಮರಾಜನಗರ ತಂಡಗಳಿಗೂ ಮಂಡ್ಯ, ಚಾಮರಾಜನಗರದಲ್ಲಿ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ. ಈ ತಂಡಕ್ಕೆ ಆಯ್ಕೆ ಆದವರ ನಡುವೆ ಪಂದ್ಯಗಳನ್ನಾಡಿಸಿ ಇದರಲ್ಲಿ ಉತ್ತಮ ಆಟಗಾರರನ್ನು ಆಯ್ಕೆ ಮಾಡಿ ಮೈಸೂರು ಜೋನ್ ತಂಡವನ್ನು ಆಯ್ಕೆ ಮಾಡಲಾಗುವುದು. ಈ ರೀತಿ ಆಯ್ಕೆಯಾದ ಮೈಸೂರು ಜೋನ್ ತಂಡ ರಾಜ್ಯ ಮಟ್ಟದ ಪಂದ್ಯಗಳಲ್ಲಿ ಆಡಲಿದೆ. ಈ ಪ್ರಕ್ರಿಯೆಗೆ ಸುಮಾರು 235 ಮಂದಿ ಮಕ್ಕಳು ಭಾಗವಹಿಸಿದ್ದರು.

ಅಕಾಡೆಮಿಯ ಆಯ್ಕೆದಾರರಾದ ಕೆ.ಆರ್.ಪವನ್, ಸಿ.ಕೆ.ಮುರಳೀಧರ್, ಬಿ.ಟಿ.ನರಸಿಂಹ, ಸುದರ್ಶನ್ ಬಾಬು 45 ಮಕ್ಕಳನ್ನು ಆಯ್ಕೆ ಮಾಡಲಿದ್ದಾರೆ.

ಈ ಸಂದರ್ಭದಲ್ಲಿ ಅಕಾಡೆಮಿ ಅಧ್ಯಕ್ಷ ಎಸ್.ಸುಧಾಕರ್ ರೈ, ಕನ್ವೀನರ್ ಬಾಲಚಂದ್ರ ಉಪಸ್ಥಿತರಿದ್ದರು. (ಎಚ್.ಎನ್, ಎಂ.ಎನ್)

Leave a Reply

comments

Related Articles

error: