ಕರ್ನಾಟಕಪ್ರಮುಖ ಸುದ್ದಿ

ನಾನು ಸೋತರೆ ಬಸವಣ್ಣನವರ ತತ್ತ್ವಗಳಿಗೆ ಹಿನ್ನಡೆಯಾದಂತೆ: ಎಂ.ಬಿ.ಪಾಟೀಲ್

ವಿಜಯಪುರ(ಏ.16): ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ತಮಗೆ ಸೋಲುಂಟಾದರೆ ಅದು ಬಸವಣ್ಣನವರ ತತ್ತ್ವಗಳಿಗೆ ಹಿನ್ನಡೆಯಾದಂತೆಯೇ ಸರಿ ಎಂದು ರಾಜ್ಯ ಜಲಸಂಪನ್ಮೂಲ ಸಚಿವ ಹಾಗೂ ಬಬಲೇಶ್ವರ ಕ್ಷೇತ್ರದಿಂದ ಕಾಂಗ್ರೆಸ್ ಶಾಸಕರೂ ಆಗಿರುವ ಎಂ.ಬಿ.ಪಾಟೀಲ್ ಅಭಿಪ್ರಾಯಪಟ್ಟಿದ್ದಾರೆ.

ಭಾನುವಾರ ಹರಿಹರ ತಾಲೂಕಿನ ಕಾಗಿನೆಲೆ ಕನಕ ಪೀಠದ ಶಾಖಾ ಮಠಕ್ಕೆ ಭೇಟಿ ನೀಡಿದ್ದ ವೇಳೆ ಅಲ್ಲಿನ ಸ್ವಾಮೀಜಿಗಳೊಂದಿಗೆ ಕೆಲಕಾಲ ಮಾತುಕತೆ ನಡೆಸಿದ್ದಾರೆ. ಕಾಗಿನೆಲೆಗೂ ತೆರಳಿ ಶ್ರೀನಿರಂಜನಾನಂದಪುರಿ ಶ್ರೀಗಳ ಜೊತೆಯೂ ಸಚಿವ ಪಾಟೀಲ್ ಅವರು ಚರ್ಚೆ ನಡೆಸಿದ್ದಾರೆ.

ಇದೇ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು “ಬಬಲೇಶ್ವರದಲ್ಲಿ ನನಗೆ ಗೆಲ್ಲುವ ವಿಶ್ವಾಸವಿದೆ. ಒಂದು ವೇಳೆ ಸೋಲುಂಟಾದರೆ ಅದು ಬಸತ್ವ ತತ್ತ್ವಗಳಿಗೆ ಉಂಟಾಗುವ ಸೋಲು” ಎಂದು ಹೇಳಿದ್ದಾರೆ. (ಎನ್.ಬಿ)

Leave a Reply

comments

Related Articles

error: