ಮೈಸೂರು

ವಿಶ್ವ ಏಡ್ಸ್ ದಿನಾಚರಣೆ ಅಂಗವಾಗಿ ಬೀದಿ ನಾಟಕ, ಜಾಥಾ

ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಷನ್ ಆಫ್ ಇಂಡಿಯಾದ ಮೈಸೂರು ಶಾಖೆ, ರೋಟರಿ ಐವರಿಸಿಟಿ ಮತ್ತು ವಿದ್ಯಾ ವಿಕಾಸ್ ಕಾಲೇಜು ಸಮಾಜಕಾರ್ಯ ವಿಭಾಗದ ಸಹಕಾರದೊಂದಿಗೆ ವಿಶ್ವ ಏಡ್ಸ್ ದಿನಾಚರಣೆ ಅಂಗವಾಗಿ ಗುರುವಾರದಂದು ಬೀದಿ ನಾಟಕ ಮತ್ತು ಜಾಥಾ ಏರ್ಪಡಿಸಲಾಗಿತ್ತು.

ಉದಯಗಿರಿಯ ಎಫ್‍ಪಿಎ ಇಂಡಿಯಾ ಶಾಖಾ ಕಚೇರಿಯಿಂದ ರಿಂಗ್ ರಸ್ತೆ ಮಾರ್ಗವಾಗಿ ಕೆಸರೆ ಬಸ್‍ ನಿಲ್ದಾಣ, ಎನ್.ಆರ್. ಮೊಹಲ್ಲಾದ ಸುತ್ತಮುತ್ತ ಮತ್ತು ಆರ್‍.ಎಸ್. ನಾಯ್ಡುನಗರದವರೆಗೆ ಜಾಥಾ ಹಮ್ಮಿಕೊಳ್ಳಲಾಗಿತ್ತು.

ಏಡ್ಸ್ ಕಾಯಿಲೆ ಬಗ್ಗೆ ಬೀದಿ ನಾಟಕ ಮಾಡುವ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು. ವಿದ್ಯಾ ವಿಕಾಸ ಕಾಲೇಜಿನ ಸಮಾಯಕಾರ್ಯ ವಿಭಾಗದ ವಿದ್ಯಾರ್ಥಿಗಳು, ಕಾರ್ಯಕ್ರಮದ ಆಯೋಜಕರಾದ ಇಂದುಶೇಖರ್, ಡಾ. ವಿ.ಎಸ್. ಕೃಷ್ಣ, ಮಹೇಶ್, ರೋಟರಿ ಐವರಿಸಿಟಿ ಅಧ್ಯಕ್ಷರ ರೋ. ಮುತ್ತುಕುಮಾರನ್, ಎಫ್.ಪಿ.ಎ. ಇಂಡಿಯಾ ಕಾರ್ಯಕಾರಿ ಸಮಿತಿ ಸದಸ್ಯರಾದ ಜಯಶ್ರೀ ಎಂ. ಅರಸ್, ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಷನ್ ಆಫ್ ಇಂಡಿಯಾದ ಸದಸ್ಯರು ಉಪಸ್ಥಿತರಿದ್ದರು.

aids-rally-2

Leave a Reply

comments

Related Articles

error: