ಮನರಂಜನೆ

`ಗುಳ್ಟು’ ನೋಡಿದ ಯಶ್ ಫುಲ್ ಥ್ರಿಲ್

ಬೆಂಗಳೂರು,ಏ.16-ರಾಕಿಂಗ್ ಸ್ಟಾರ್ ಯಶ್ `ಗುಳ್ಟು’ ಸಿನಿಮಾವನ್ನು ನೋಡಿದ್ದಾರೆ. ಗುಳ್ಟು ಸಿನಿಮಾ ನೋಡಿದ ಯಶ್ ಸಿನಿಮಾ ಬಗ್ಗೆ ಏನು ಹೇಳಿದ್ದಾರೆ ಎಂಬುದಕ್ಕೆ ಇಲ್ಲಿದೆ ಉತ್ತರ…

ಗುಳ್ಟು ಸಿನಿಮಾ ನೋಡಿದ ಯಶ್ ಫುಲ್ ಥ್ರಿಲ್ ಆಗಿದ್ದಾರೆ. ಕಾನ್ಸೆಪ್ಟ್ ತುಂಬಾ ಚೆನ್ನಾಗಿದೆ. ಯೂತ್ಸ್ ಈ ಸಿನಿಮಾಗೆ ಹೆಚ್ಚು ಹೆಚ್ಚು ಬರ್ತಾ ಇದ್ದಾರೆ. ಆದರೆ ಗುಳ್ಟು ಸಿನಿಮಾ ಎಲ್ಲರೂ ನೋಡಬೇಕಿರುವ ಸಿನಿಮಾ. ವಿಷಯವನ್ನು ಎಲ್ಲೂ ಬೋರ್ ಆಗದೆ ರೀತಿ ಪ್ರಸೆಂಟ್ ಮಾಡಿದ್ದಾರೆ. ಇವರ ಈ ಪ್ರಯತ್ನವನ್ನು ಮೆಚ್ಚಲೇಬೇಕು ಎಂದು ಸಿನಿಮಾ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದ್ದಾರೆ.

ಕಲಾವಿದರೂ ತುಂಬಾನೇ ಶ್ರಮ ಪಟ್ಟು ಸಿನಿಮಾ ಮಾಡಿದ್ದಾರೆ. ನಿರ್ದೇಶಕರು ಇಂಥದ್ದೊಂದು ವಿಷಯ ಇಟ್ಕೊಂಡು ಸಿನಿಮಾ ಮಾಡೋದು ಸುಲಭದ ವಿಷಯವಲ್ಲ. ಆದರೆ ತುಂಬಾ ಅಚ್ಚುಕಟ್ಟಾಗಿ ಸಿನಿಮಾ ಮಾಡಿದ್ದಾರೆ. ಕ್ಯಾಮರಾ ವರ್ಕ್​​ ಆಗಿರಬಹುದು. ಮ್ಯೂಸಿಕ್​ ಆಗಿರಬಹುದು ಎಲ್ಲವೂ ಪರ್ಫೆಕ್ಟ್​ ಆಗಿ ಮ್ಯಾಚ್​ ಆಗಿದೆ ಎಂದಿದ್ದಾರೆ.

ಜನಾರ್ಧನ್ ಚಿಕ್ಕಣ್ಣ ನಿರ್ದೇಶನದ ಈ ಚಿತ್ರದಲ್ಲಿ ನವೀನ್ ಶಂಕರ್, ಸೋನು ಗೌಡ, ರಂಗಾಯಣ ರಘು, ಅವಿನಾಶ್ ಅಭಿನಯಿಸಿದ್ದಾರೆ. (ಎಂ.ಎನ್)

Leave a Reply

comments

Related Articles

error: