ದೇಶಪ್ರಮುಖ ಸುದ್ದಿ

ಆಸಿಫಾ ಅತ್ಯಾಚಾರ ಪ್ರಕರಣ: ಏ.28ಕ್ಕೆ ವಿಚಾರಣೆ ಮುಂದೂಡಿಕೆ

ಶ್ರೀನಗರ,ಏ.16-ಕಥುವಾ ಅತ್ಯಾಚಾರ ಪ್ರಕರಣದ ವಿಚಾರಣೆಯನ್ನು ಏ.28ಕ್ಕೆ ಮುಂದೂಡಲಾಗಿದೆ. ಪ್ರಕರಣದ ವಿಚಾರಣೆಯನ್ನು ಕಥುವಾದಿಂದ ಚಂಡೀಘಡಕ್ಕೆ ವರ್ಗಾಯಿಸಬೇಕೆಂದು ಆಸಿಫಾಳ ತಂದೆ ಸುಪ್ರೀಂ ಕೋರ್ಟ್ ನಲ್ಲಿ ಮನವಿ ಸಲ್ಲಿಸಿರುವುದರಿಂದ ಆರೋಪಿಗಳ ವಿಚಾರಣೆಯನ್ನು ಮುಂದೂಡಲಾಗಿದೆ.

ತಮ್ಮ ಕುಟುಂಬ ಹಾಗೂ ಕೇಸು ವಾದಿಸುತ್ತಿರುವ ವಕೀಲರಿಗೆ ರಕ್ಷಣೆ ನೀಡಬೇಕೆಂದು ಆಸಿಫಾಳ ತಂದೆ ಮನವಿ ಮಾಡಿಕೊಂಡಿದ್ದಾರೆ.

ಬಂಧಿತ ಎಂಟು ಆರೋಪಿಗಳ ವಿಚಾರಣೆ ಇಂದಿನಿಂದ (ಸೋಮವಾರ) ಕಥುವಾ ಚೀಫ್ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ನಲ್ಲಿ ನಡೆಯಬೇಕಿತ್ತು. ಆದರೆ ಆಸಿಫಾಳ ತಂದೆ ಸುಪ್ರೀಂ ಕೋರ್ಟ್ ನಲ್ಲಿ ಮನವಿ ಸಲ್ಲಿಸಿದ್ದರಿಂದ ವಿಚಾರಣೆಯನ್ನು ಮುಂದೂಡಲಾಗಿದೆ.

ಬಂಧಿತ ಆರೋಪಿಗಳಲ್ಲಿ ಓರ್ವ ಬಾಲಾಪರಾಧಿ ಇದ್ದು, ಆತನಿಗೆ ಪ್ರತ್ಯೇಕ ಆರೋಪ ಪಟ್ಟಿ ಸಲ್ಲಿಸಲಾಗಿದೆ. ಮಕ್ಕಳ ಹಕ್ಕುಗಳ ನಿಯಮ ಪ್ರಕಾರ ಕಥುವಾ ಚೀಫ್ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ನಲ್ಲಿ ಈತನ ವಿಚಾರಣೆ ನಡೆಯಲಿದೆ. ಇನ್ನುಳಿದ ಏಳು ಆರೋಪಿಗಳ ವಿಚಾರಣೆ ಸೆಷನ್ಸ್ ನ್ಯಾಯಾಲಯದಲ್ಲಿ ನಡೆಯಲಿದೆ.

ಈ ಪ್ರಕರಣದಲ್ಲಿ ಹಿಂದೂ-ಮುಸ್ಲಿಂ ದ್ವೇಷ ಭುಗಿಲೆದ್ದಿರುವ ಕಾರಣ, ತಟಸ್ಥ ನಿಲುವು ಸ್ವೀಕರಿಸುವುದಕ್ಕಾಗಿ ಜಮ್ಮು ಕಾಶ್ಮೀರ ಸರ್ಕಾರ ಈ ಎರಡೂ ಧರ್ಮಕ್ಕೆ ಸೇರದ ಇಬ್ಬರು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್‍‍ಗಳನ್ನು ನೇಮಕ ಮಾಡಿದೆ. (ಎಂ.ಎನ್)

 

Leave a Reply

comments

Related Articles

error: