ಮೈಸೂರು

ಏ.20ರಂದು ಶಂಕರಾಚಾರ್ಯರ ರಥೋತ್ಸವ : ವಿಶೇಷ ಪ್ರವಚನ

ಮೈಸೂರು,ಏ.16 : ಆದಿ ಗುರು ಶಂಕರಾಚಾರ್ಯರ ಜಯಂತಿ ಅಂಗವಾಗಿ ವಿಶೇಷ ಪ್ರವಚನ ಹಾಗೂ ರಥೋತ್ಸವವನ್ನು ವಿಪ್ರ ಜಾಗೃತಿ ವೇದಿಕೆ ಆಯೋಜಿಸಿದೆ.

ಸಂಜೆ 6ಕ್ಕೆ ವಿದ್ಯಾರಣ್ಯಪುರಂನಲ್ಲಿರುವ ವೇದಿಕೆಯಲ್ಲಿ ಪ್ರವಚನ ನಡೆಯಲಿದೆ, ಏ.18ರಂದು ‘ಶಂಕರಾಚಾರ್ಯರ ಜೀವನ ಮತ್ತು ಸಾಧನೆಗಳ’ ಬಗ್ಗೆ ಕೆ.ಕೇಶವಮೂರ್ತಿ ಅವರು  ಏ.19ರಂದು ‘ಶಂಕರಾಚಾರ್ಯರ ವಿಚಾರಧಾರೆಗಳು’ ವಿಷಯವಾಗಿ ಡಾ.ಜ್ಯೋತಿ ಶಂಕರ್ ಅವರಿಂದ ಪ್ರವಚನ.

ಆದಿಗುರು ಶಂಕರಾಚಾರ್ಯರ ರಥೋತ್ಸವವು ಏ.20ರ ಸಂಜೆ 6ಕ್ಕೆ ಆವನಿಶಂಕರಮಠದಿಂದ ಆರಂಭಿಸಿ ವಿದ್ಯಾರಣ್ಯಪುರಂನ ಪ್ರಮುಖ ಬೀದಿಗಳಲ್ಲಿ ಸಂಚರಿಸುವುದು ಎಂದು ಅಧ್ಯಕ್ಷ ಜೆ.ರಮೇಶ್, ಕಾರ್ಯ ಎಂ.ಎಸ್.ಸುರೇಶ್ ಹೇಳಿಕೆ ನೀಡಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: