ಮೈಸೂರು

ಪ್ರಾಣಿಗಳ ಸಾವಿಗೆ ಮೃಗಾಲಯದ ಅಧಿಕಾರಿಗಳು ಕಾರಣ: ಆರೋಪ, ಪ್ರತಿಭಟನೆ

ಮೈಸೂರಿನ ಚಾಮರಾಜೇಂದ್ರ ಮೃಗಾಲಯದಲ್ಲಿ ಅಪರೂಪದ ಪ್ರಾಣಿಗಳ ಸರಣಿ ಸಾವನ್ನು ವಿರೋಧಿಸಿ ಕರ್ನಾಟಕ ಸೇನಾ ಪಡೆಯ ಕಾರ್ಯಕರ್ತರು ಗುರುವಾರದಂದು ಮೃಗಾಲಯದ ಮುಂಭಾಗದಲ್ಲಿ ಪ್ರತಿಭಟನೆಯನ್ನು ನಡೆಸಿದರು.

ಮೃಗಾಲಯದ ಅಧಿಕಾರಿಗಳ ಬೇಜವಾಬ್ದಾರಿತನದಿಂದ ಅಪರೂಪದ ಪ್ರಾಣಿಗಳು ಸರಣಿ ಸಾವಿಗೀಡಾಗಿವೆ. ಪ್ರಾಣಿಗಳ ಸಾವಿಗೆ ಕಾರಣರಾದ ಅಧಿಕಾರಿಗಳನ್ನು ಈ ಕೂಡಲೇ ಅಮಾನತು ಮಾಡಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಕರ್ನಾಟಕ ಸೇನಾ ಪಡೆಯ ರವಿ ಗೌಡ, ಶಂಕರ್ ಮತ್ತು ರವಿ ಸೇರಿ ಇನ್ನಿತರರು ಹಾಜರಿದ್ದರು.

Leave a Reply

comments

Related Articles

error: