ಮೈಸೂರು

ಇಬ್ಬರು ಟಿಪ್ಪರ್ ಕಳ್ಳರ ಬಂಧನ. 3,00,000ರೂ. ಮೌಲ್ಯದ ಟಿಪ್ಪರ್ ವಶ

ಮೈಸೂರು,ಏ.17:- ಮೈಸೂರು ನಗರ ವಿಜಯನಗರ ಪೊಲೀಸ್ ಠಾಣಾ ಸರಹದ್ದಿನ ಹಿನಕಲ್‍ಗ್ರಾಮದ ಹುಂಡಿ ಬೀದಿಯಲ್ಲಿರುವ ಮನೆ ನಂ. 639/1 ಹಿಂಭಾಗ ನಿಲ್ಲಿಸಿದ್ದ ಟಾಟಾ ಟಿಪ್ಪರ್  ಕಳ್ಳತನವಾಗಿದ್ದ ಹಿನ್ನೆಲೆಯಲ್ಲಿ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು., ತನಿಖೆ ಕೈಗೊಂಡ ವಿಜಯನಗರ ಪೊಲೀಸರು ಇಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತರನ್ನು  ಮಂಜುನಾಥ @ ಮಂಜು ಬಿನ್ ಮಹದೇವ, (40) ವಿನಾಯಕ ನಗರ, ತಿತಿಮತಿ, ವಿರಾಜಪೇಟೆ ತಾಲೂಕು, ಕೊಡಗು ಜಿಲ್ಲೆ, ಮಂಜುನಾಥ  ಬಿನ್ ಕೃಷ್ಣಪ್ಪ, (32 ) ಹೊನ್ನಾವರ ಗ್ರಾಮ, ನಾಗಮಂಗಲ ತಾಲೂಕು, ಮಂಡ್ಯ ಜಿಲ್ಲೆ ಎಂದು ಗುರುತಿಸಲಾಗಿದ್ದು, ಏ.15ರಂದು ಮೈಸೂರಿನ ಜೋಡಿ ತೆಂಗಿನ ಮರದ ಸ್ಮಶಾನದ ಮುಂಭಾಗದ ರಸ್ತೆಯಲ್ಲಿ ಟಿಪ್ಪರ್ ಸಮೇತ ಹಿಡಿದು ವಿಚಾರಣೆ ಮಾಡಲಾಗಿ ಆರೋಪಿಗಳು ಇಬ್ಬರೂ ಡ್ರೈವರ್‍ಗಳಾಗಿದ್ದು, ಹಣದ ಆಸೆಗೆ ಮೇಲ್ಕಂಡಂತೆ ಟಿಪ್ಪರ್ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ.  ಆರೋಪಿಗಳಿಂದ 3,00,000 ರೂ. ಮೌಲ್ಯದ ಟಿಪ್ಪರನ್ನು ವಶಪಡಿಸಿಕೊಳ್ಳಲಾಗಿದೆ. ಈ ಪತ್ತೆ ಕಾರ್ಯವನ್ನು ಮೈಸೂರು ನಗರದ ಅಪರಾಧ ವಿಭಾಗದ ಡಿ.ಸಿ.ಪಿ. ಮಹಾನಿಂಗ ಬಿ ನಂದಗಾಂವಿ ಅವರ ಮಾರ್ಗದರ್ಶನದಲ್ಲಿ  ನರಸಿಂಹರಾಜ ವಿಭಾಗದ ಎ.ಸಿ.ಪಿ.ರವರಾದ  ಗೋಪಾಲ್‍ರವರ ಉಸ್ತುವಾರಿಯಲ್ಲಿ  ವಿಜಯನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‍ಪೆಕ್ಟರ್ ಪಿ.ಎನ್. ಅನಿಲ್‍ಕುಮಾರ್, ಪಿ.ಎಸ್.ಐ. ಎನ್. ರಾಮಚಂದ್ರ, ಸಿಬ್ಬಂದಿಯವರಾದ ಎಸ್. ಮಹದೇವ, ಶಂಕರ್, ಈಶ್ವರ್, ಸ್ವಾಮರಾಧ್ಯ, ಸಾಗರ್, ಸಿ.ಮಹೇಶ್‍ ನಡೆಸಿದ್ದಾರೆ. (ಎಸ್.ಎಚ್)

Leave a Reply

comments

Related Articles

error: