
ಮೈಸೂರು
ಕ್ರೀಡಾಪಟುಗಳಿಗೆ ತರಬೇತಿ: ಅರ್ಜಿ ಆಹ್ವಾನ
2020ರಲ್ಲಿ ಜಪಾನ್ನ ಟೋಕಿಯೊ ಒಲಂಪಿಕ್ಸ್ ಮತ್ತು 2024ರ ಒಲಂಪಿಕ್ಸ್ ದೃಷ್ಟಿಯಲ್ಲಿರಿಸಿಕೊಂಡು ಪ್ರೌಢಶಾಲೆ ಹಾಗೂ ಪಿಯುಸಿ ಪ್ರತಿಭಾವಂತ ಕ್ರೀಡಾಪಟುಗಳಿಗೆ ಹೆಚ್ಚಿನ ತರಬೇತಿ ನೀಡಲು ನ್ಯಾಷನಲ್ ಯುವ ಕೋ-ಅಪರೇಟಿವ್ ಸೊಸೈಟಿ ಲಿಮಿಟೆಡ್ನಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಸಂಸ್ಥೆಯ ಜಿಲ್ಲಾ ಪ್ರತಿನಿಧಿ ಧನಂಜಯ್ ಅಗೋಳಿಕಜೆ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಅವರು ಗುರುವಾರದಂದು ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಡಿ.10ರಂದು ಕುಶಾಲನಗರದ ಕೂಡಿಗೆಯ ಕ್ರೀಡಾ ಪ್ರೌಢಶಾಲೆಯ ಸಿಂಥೆಟಿಕ್ ಮೈದಾನದಲ್ಲಿ 2016-17ನೇ ಸಾಲಿನ ಗೇಲ್ ಇಂಡಿಯನ್ ಸ್ಪೀಡ್ ಸ್ಟಾರ್ ಆಯ್ಕೆಯು ಜರುಗಲಿದೆ. ಯುವಕ-ಯುವತಿಯರಿಗೆ ಎರಡು ವಿಭಾಗದಲ್ಲಿ ಪ್ರತ್ಯೇಕ ಆಯ್ಕೆ ನಡೆಯಲಿದ್ದು 11 ರಿಂದ 14 ವರ್ಷ ಹಾಗೂ 17 ವರ್ಷದೊಳಗಿನ ವಯೋಮಾನದವರು ಭಾಗವಹಿಸಬಹುದು. ರಾಷ್ಟ್ರೀಯ ಯುವ ಸಹಕಾರ ಸಂಸ್ಥೆಯು ಭಾರತ ಪೆಟ್ರೋಲಿಯಂ ಮತ್ತು ಗ್ಯಾಸ್ ಇಲಾಖೆಯ ಪ್ರಯೋಜಕತ್ವದಲ್ಲಿ ಈ ಆಯ್ಕೆಯು ನಡೆಯುವುದು. ವಿಶ್ವದ ಜನಸಂಖ್ಯೆಯಲ್ಲಿ ಶೇ.20ರಷ್ಟು ಹೊಂದಿದ್ದರೂ ಒಲಂಪಿಕ್ ಕ್ರೀಡಾಕೂಟಗಳಲ್ಲಿ ನಮ್ಮ ದೇಶದ ಸಾಧನೆ ಶೋಚನೀಯವಾಗಿದೆ. ಮುಂದಿನ ಕ್ರೀಡಾಕೂಟವನ್ನು ದೃಷ್ಟಿಯಲ್ಲಿರಿಸಿಕೊಂಡು ಆಯ್ಕೆಯಾದ ಕ್ರೀಡಾಪ್ರತಿಭೆಗಳಿಗೆ ತಜ್ಞರಿಂದ ತರಬೇತಿ ಹಾಗೂ ಮುಂದಿನ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಡಲಾಗುವುದು. ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗಳಲ್ಲಿ ಅರ್ಜಿ ಲಭ್ಯವಿದ್ದು, ಡಿ.7ರವರೆಗೆ ಕಚೇರಿಗೆ ಮರಳಿಸಬೇಕು. ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಲು ಶಾಲಾ-ಕಾಲೇಜಿನ ದೈಹಿಕ ಶಿಕ್ಷಕರು ಮುಖ್ಯೋಪಾಧ್ಯಾಯರು ಹಾಗೂ ಪ್ರಾಂಶುಪಾಲರು ಕ್ರೀಡಾಪಟುಗಳಿಗೆ ಪ್ರೋತ್ಸಾಹ ತುಂಬಿ ಎಂದು ತಿಳಿಸಿದರು. ಹೆಚ್ಚಿನ ಮಾಹಿತಿಗಾಗಿ ಧನಂಜಯರ್ -94497312338, ಅನಿಲ್ ಕುಮಾರ್ ಕೆ.ಎಂ. – 9964769330, 8553545382 ಮುಕುಂದ – 9611409451 ಹಾಗೂ ರಾಕೇಶ್ ಕೆ. -9743445870 ಸಂಪರ್ಕಿಸಬಹುದು. ಸುದ್ದಿಗೋಷ್ಠಿಯಲ್ಲಿ ಅನಿಲ್ ಕುಮಾರ್ ಹಾಗೂ ಮುಕುಂದು ಉಪಸ್ಥಿತರಿದ್ದರು.