ಮೈಸೂರು

ಸ್ಫಟಿಕ ವಿದ್ಯಾಲಯದಿಂದ ‘ಅಂತರ ಶಾಲಾ ಸ್ಪರ್ಧೆಗಳು’ ಡಿ.6ರಂದು

ಗೋಕುಲಂನ ಸ್ಫಟಿಕ ವಿದ್ಯಾಲಯದಿಂದ ‘ಅಂತರ ಶಾಲಾ ಸ್ಪರ್ಧೆ’ಗಳನ್ನು ಆಯೋಜಿಸಲಾಗಿದೆ ಎಂದು ಶಿಕ್ಷಕಿ ಶ್ವೇತಾ ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಅವರು, ಪತ್ರಕರ್ತರ ಭವನದಲ್ಲಿ ಮಾತನಾಡಿ, ಡಿ.6ರಂದು ಬೆಳಗ್ಗೆ 9ಕ್ಕೆ ಶಾಲಾ ಆವರಣದಲ್ಲಿ ಸ್ಪರ್ಧೆಗಳು ಜರುಗಲಿದ್ದು, 2.5 ವರ್ಷದಿಂದ 6 ವರ್ಷದೊಳಗಿನ ಮಕ್ಕಳಿಗೆ 3 ವಿಭಾಗಗಳಲ್ಲಿ ರೈಮ್ಸ್, ಛದ್ಮವೇಷ, ಹಾಗೂ ಚಿತ್ರಗಳಿಗೆ ಬಣ್ಣ ತುಂಬುವ ಸ್ಪರ್ಧೆಗಳು ಜರುಗಲಿದೆ. ಸ್ಪರ್ಧೆಗೆ ಬೇಕಾಗುವ ಪರಿಕರಗಳನ್ನು ಒದಗಿಸಲಾಗುವುದು. ಒಬ್ಬರಿಗೆ 20 ರೂಪಾಯಿ ಪ್ರವೇಶ ದರವಿದೆ. ಪ್ರಥಮ ಹಾಗೂ ದ್ವಿತೀಯ ಬಹುಮಾನವಲ್ಲದೆ ಪಾಲ್ಗೊಂಡ ಪ್ರತಿಯೊಂದು ಮಗುವಿಗೆ ಒಂದು ಪ್ರಶಸ್ತಿ ಪತ್ರ ಹಾಗೂ ಕಿರುಕಾಣಿಕೆ ನೀಡಲಾಗುವುದು. ಈಗಾಗಲೇ ಶಾಲೆಗಳಿಗೆ ಸುತ್ತೋಲೆಯನ್ನು ಕಳುಹಿಸಲಾಗಿದ್ದು ಹೆಸರು ನೋಂದಾಯಿಸಿಕೊಳ್ಳಲು ಡಿ.3 ಕೊನೆಯ ದಿನವಾಗಿದೆ. ಮಕ್ಕಳಲ್ಲಿರುವ ಸುಪ್ತ ಪ್ರತಿಭೆಯನ್ನು ಹೊರತೆಗೆಯಲು ಇದೊಂದು ಸುರ್ವಣವಕಾಶವಾಗಿದೆ. ಅದರಂತೆ ಪೋಷಕರ ಕೆಲಸಮಯ ಮಕ್ಕಳೊಂದಿಗೆ ಕಾಲ ಕಳೆಯಬಹುದು ಎಂದರು.

ಸುದ್ದಿಗೋಷ್ಠಿಯಲ್ಲಿ ಶಿಕ್ಷಕಿಯರಾದ ದಿವ್ಯಾ, ನೀತೂ ಹಾಗೂ ಸಂಸ್ಥೆಯ ಕಾರ್ಯದರ್ಶಿ ವೈಶಾಲಿ ಉಪಸ್ಥಿತರಿದ್ದರು.

Leave a Reply

comments

Related Articles

error: