ಮೈಸೂರು

ಇಂದಿನಿಂದ ಆರಂಭವಾಗಲಿದೆ ನಾಮಪತ್ರ ಸಲ್ಲಿಕೆ

ಮೈಸೂರು,ಏ.17:- ರಾಜ್ಯ ವಿಧಾನಸಭೆಗೆ ಮೇ.12ರಂದು ಚುನಾವಣೆ ನಡೆಯಲಿದ್ದು, ಇಂದಿನಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ.

ಇಂದಿನಿಂದ ಏಪ್ರೀಲ್ 24ರವರೆಗೂ ನಾಮಪತ್ರ ಸಲ್ಲಿಕೆಗೆ ಅವಕಾಶವಿದ್ದು,  ಬೆಳಿಗ್ಗೆ 11ರಿಂದ ಮಧ್ಯಾಹ್ನ 3ಗಂಟೆಯವರೆಗೂ ನಾಮಪತ್ರ ಸಲ್ಲಿಸಬಹುದು. ಏ.25ರಂದು ನಾಮಪತ್ರ ಪರಿಶೀಲನೆ, ಏ.27ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿರುತ್ತದೆ. ಬೇರೆ ಕ್ಷೇತ್ರದ ಅಭ್ಯರ್ಥಿಯಾಗಿದ್ದರೆ ಎರಡು ರೀತಿಯ ಅಫಿಡವಿಟ್ ಸಲ್ಲಿಸಬೇಕು. ಯಾವುದೇ ಮಾಹಿತಿ ತುಂಬದಿದ್ದಲ್ಲಿ ನಾಮಪತ್ರ ತಿರಸ್ಕೃತಗೊಳ್ಳಲಿದೆ. ನಾಮಪತ್ರ ಸಲ್ಲಿಸುವ ಎಸ್ ಎಸ್.ಟಿ ಅಭ್ಯರ್ಥಿಗಳಿಗೆ ಐದು ಸಾವಿರ ಠೇವಣಿ ಹಾಗೂ ಇತರೇ ವರ್ಗದ ಅಭ್ಯರ್ಥಿಗಳು ಕಡ್ಡಾಯವಾಗಿ ಹತ್ತು ಸಾವಿರ ಠೇವಣಿ ಕಟ್ಟಲೇ ಬೇಕಿದೆ. ಅಭ್ಯರ್ಥಿಯ ಜೊತೆ ಕೇವಲ ಮೂರು ವಾಹನ ಬರಲು ಅವಕಾಶವಿದ್ದು, ಐದು ಜನರು ಮಾತ್ರ ಬರಬೇಕಿದೆ.  ಒಂದೇ ಹಂತದಲ್ಲಿ ಮೇ.12ರಂದು ಚುನಾವಣೆ ನಡೆಯಲಿದ್ದು, ಮೇ.15ಕ್ಕೆ ಫಲಿತಾಂಶ ಹೊರಬೀಳಲಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: