ಕ್ರೀಡೆಮೈಸೂರು

ಹಾಕಿಯಲ್ಲಿ ಮೈಸೂರು ಬಾಲಕಿಯರ ತಂಡದ ಸಾಧನೆ

ತುಮಕೂರಿನ ಎಸ್.ಐ.ಟಿ. ಕಾಲೇಜು ಕ್ರೀಡಾಂಗಣದಲ್ಲಿ ರಾಜ್ಯ ಸರ್ಕಾರ ಪದವಿಪೂರ್ವ ಶಿಕ್ಷಣ ಇಲಾಖೆ ವತಿಯಿಂದ ನಡೆದ ಬಾಲಕ-ಬಾಲಕಿಯರ ರಾಜ್ಯ ಮಟ್ಟದ ಪದವಿ ಪೂರ್ವ ಕಾಲೇಜುಗಳ ಹಾಕಿ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಬಾಲಕಿಯರ ತಂಡ ಕಪ್ ಅನ್ನು ಮುಡಿಗೇರಿಸಿಕೊಂಡಿದೆ.

ಮೊದಲನೇ ಸೆಮಿಫೈನಲ್ ಪಂದ್ಯಾವಳಿಯಲ್ಲಿ ಮೈಸೂರು ತಂಡವು 2-0 ಗೋಲುಗಳಿಂದ ಉಡುಪಿ ಎದುರು ಏಕಪಕ್ಷೀಯ ಜಯ ತನ್ನದಾಗಿಸಿಕೊಂಡರೆ ಅತ್ತ ಎರಡನೇ ಸೆಮಿಫೈನಲ್ ಪಂದ್ಯಾವಳಿಯಲ್ಲಿ ಕೊಡಗು ತಂಡವು 3-0 ಗೋಲುಗಳಿಂದ ಮಂಗಳೂರು ತಂಡವನ್ನು ಮಣಿಸಿ ಫೈನಲ್‍ ಹಂತಕ್ಕೆ ತಲುಪಿತು. ಮೈಸೂರು ಹಾಗೂ ಕೊಡಗು ತಂಡಗಳ ಫೈನಲ್‍ ಪಂದ್ಯಾವಳಿಯ ಮೊದಲಾರ್ಧದಲ್ಲೇ ಪ್ರಾಬಲ್ಯ ಸಾಧಿಸಿದ ಮೈಸೂರಿನ ಯಶಿಕಾ 18ನೇ ನಿಮಿಷದಲ್ಲಿ ಗೋಲು ಬಾರಿಸಿ ಖಾತೆ ತೆರೆದು 1-0  ಗೋಲುಗಳ ಮುನ್ನಡೆಯಿಂದ ವಿಶ್ರಾಂತಿಗೆ ತೆರಳಿದ ಬಳಿಕ ಕೊಡಗು ವಿರಾಮದ ನಂತರ ಮತ್ತಷ್ಟು ಚುರುಕಿನ ಆಟಕ್ಕೆ ಒತ್ತು ನೀಡಿತು. ಇದರ ಪರಿಣಾಮ ಹಿನ್ನಡೆ ಅನುಭವಿಸಿದ ಕೊಡಗು ಚೇತರಿಸಿಕೊಂಡು ತಂಡದ ಪಾರ್ವತಿ 30 ನಿಮಿಷದಲ್ಲಿ ಗೋಲು ಬಾರಿಸಿ ಸಮಬಲವನ್ನು ಕಂಡುಕೊಂಡರು. ಮೈಸೂರು ಜಿಲ್ಲಾ ತಂಡವು ಮತ್ತಷ್ಟು ಚುರುಕಿನ ಆಟದೊಂದಿಗೆ ಕೊನೆಯ ಎರಡು ನಿಮಿಷವಿರುವಾಗ ಅಂಜಲಿ 38 ನಿಮಿಷದಲ್ಲಿ ಗೋಲನ್ನು ಬಾರಿಸುವುದರ ಮೂಲಕ 2-1 ಅಂತರದಿಂದ ರಾಜ್ಯ ಮಟ್ಟದ ಬಾಲಕಿರ ಹಾಕಿ ಕಪ್‍ ಅನ್ನು ತನ್ನ ಮುಡಿಗೇರಿಸಿಕೊಂಡಿತು.

ಬಾಲಕರ ವಿಭಾಗದಲ್ಲಿ ತಂಡ ಪ್ರಶಸ್ತಿಯನ್ನು ಮೈಸೂರು ಜಿಲ್ಲೆಯು ಗಳಿಸಿತು. ಬಾಲಕಿಯರ ವಿಭಾಗದಲ್ಲಿ ದ್ವಿತೀಯ ಸ್ಥಾನವನ್ನು ಗಳಿಸಿತು.

ದೆಹಲಿಯಲ್ಲಿ ನಡೆಯಲಿರುವ ರಾಷ್ಟ್ರ ಮಟ್ಟದ ಕರಾಟೆ ಪಂದ್ಯಾವಳಿಗೆ ಮೈಸೂರು ಜಿಲ್ಲೆಯಿಂದ ಬಾಲಕರ ವಿಭಾಗದಲ್ಲಿ ಶಶಾಂಕ. ಎಸ್, ಶ್ರೀ ವಿವೇಕ ವಿದ್ಯಾಲಯ ಪ.ಪೂ. ಕಾಲೇಜು, ಯೋಗೆಶ್‍ ಎಚ್.ಕೆ, ಸದ್ವಿದ್ಯಾ ಸಂಯುಕ್ತ ಪ.ಪೂ. ಕಾಲೇಜು, ದರ್ಶನ್ ಬಾಲು, ಶ್ರೀ ಕಾವೇರಿ ಪ.ಪೂ. ಕಾಲೇಜು, ಸಮಿತ್‍ ಕುಮಾರ್ ಸಹಾನಿ ಸದ್ವಿದ್ಯಾ ಸೆಮಿರೆಸಿಡೆನ್ಸಿಯಲ್ ಪ.ಪೂ. ಕಾಲೇಜು ಹಾಗೂ ಬಾಲಕಿಯರ ವಿಭಾಗದಲ್ಲಿ ಅಶ್ವಿನಿ ಎಸ್, ವಿಜಯ ವಿಠಲ ಪ.ಪೂ.ಕಾಲೇಜು, ಕಾವ್ಯ ಕೆ, ಎಂ.ಎಂ.ಕೆ, ಎಸ್.ಡಿ.ಎಂ ಪ.ಪೂ.ಕಾಲೇಜಿನ ವಿದ್ಯಾರ್ಥಿಗಳು ಆಯ್ಕೆಯಾಗಿರುತ್ತಾರೆ.

Leave a Reply

comments

Related Articles

error: