ಮೈಸೂರು

ನಟ ಉಪೇಂದ್ರ ನಿರ್ಗಮನದಿಂದ ಪಕ್ಷಕ್ಕೆ ತುಸು ಹಾನಿ : ಕೆಜೆಪಿ ಕಾರ್ಯದರ್ಶಿ ಎಸ್.ಆರ್.ಕಂಠಿ

ಮೈಸೂರು,ಏ.17 : ರಾಜ್ಯ ರಾಜಕಾರಣದಲ್ಲಿ ಬದಲಾವಣೆ ತರುವ ಉದ್ದೇಶದಿಂದ ‘ನೋ ಕ್ಯಾಶ್-ನೋ ಕ್ಯಾಸ್ಟ್ ಸೂಕ್ತಿಯಡಿ ಡಿ.ಮಹೇಶ್ ಗೌಡ ಅವರು ಸ್ಥಾಪಿಸಿದ ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷವೂ 2018ರ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರಮುಖ ಪಾತ್ರ ನಿರ್ವಹಿಸುವುದು ಎಂದು ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಎಸ್.ಆರ್.ಕಂಠಿ ತಿಳಿಸಿದರು.

ಮಂಗಳವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಪಕ್ಷವೂ ಈಗಾಗಲೇ ಪ್ರಕಟಿಸಿರುವ ಪಟ್ಟಿಯಲ್ಲಿ ಪ್ರತಿಭಾವಂತ ಅಭ್ಯರ್ಥಿಗಳು  ಸ್ಪರ್ಧಿಸುತ್ತಿದ್ದು, ಜನಸೇವೆ ಮಾಡಲಿಚ್ಚಿಸುವವರು ಪಕ್ಷವನ್ನು ಸೇರಬಹುದು, ಶೀಘ್ರದಲ್ಲಿಯೇ ಇನ್ನೊಂದು ಪಟ್ಟಿ ಬಿಡುಗಡೆಗೊಳಿಸಲಾಗುವುದು ಎಂದು ತಿಳಿಸಿದರು.

ಪಕ್ಷದಿಂದ ರಿಯಲ್ ಸ್ಟಾರ್ ಉಪೇಂದ್ರ ಅವರು ಹೊರ ನಡೆದ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ ಅವರ ನಿರ್ಗಮನದಿಂದ ಪಕ್ಷಕ್ಕೆ ತುಸು ಹಾನಿಯಾಗಿದ್ದು ನಿಜ, ಅವರೇ ಬಂದರು ಹೋದರು, ಹೋಗುವಾಗ ಯಾವುದೇ ಸ್ಪಷ್ಟನೆ ನೀಡಿಲ್ಲ, ಆ ಬಗ್ಗೆ ಅವರನ್ನೇ ಕೇಳಿ ಎಂದರು.

ಕೆ.ಆರ್.ಕ್ಷೇತ್ರದ ಪಕ್ಷ ಅಭ್ಯರ್ಥಿ ಡಾ.ಜಯಂತ್ ಮಾತನಾಡಿ ಜೆಎಸ್ಎಸ್ ಆಸ್ಪತ್ರೆ ವೈದ್ಯನಾಗಿದ್ದು, ಪಕ್ಷದ ತತ್ವ ಸಿದ್ಧಾಂತಗಳು ಸೆಳೆದಿವೆ, ನನ್ನ ವೃತ್ತಿಯೊಂದಿಗೆ ಜನಸೇವೆಯನ್ನು ಆಸೆಯಿಂದ ಬಂದಿದ್ದೆ, ಆದರೆ ಉಪೇಂದ್ರ ಅವರು ಹೊರ ಹೋದ ನಂತರವು, ಪಕ್ಷದ ಕಾರ್ಯಕರ್ತರ ನಿರೀಕ್ಷೆಗೆ ದ್ರೋಹವೆಸಗದೆ ಪಕ್ಷದಿಂದಲೇ ಸ್ಪರ್ಧಿಸುತ್ತಿರುವುದು ಸಂತಸ ತಂದಿದೆ ಎಂದರು.

ಗೋಷ್ಠಿಯಲ್ಲಿ ಲಕ್ಷ್ಮೀಕಾಂತ್, ಚಿಕ್ಕಣ್ಣ ಇನ್ನಿತರರು ಇದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: