ಮನರಂಜನೆ

ಹತ್ತು ವರ್ಷಗಳ ಬಳಿಕ ಮತ್ತೆ ಜೊತೆಯಾಗಿ ನಟಿಸಲಿದ್ದಾರಂತೆ ಈ ಜೋಡಿ !

ದೇಶ(ಮುಂಬೈ)ಏ.17:-  ವಿಶ್ವಸುಂದರಿಯಾಗಿ ತಮ್ಮ ಪ್ರಯಾಣ ಆರಂಭಿಸಿದ ಬಾಲಿವುಡ್ ನ ಮೋಹಕ ತಾರೆ ಪ್ರಿಯಾಂಕಾ ಚೋಪ್ರಾ ಇದೀಗ ಅಂತಾರಾಷ್ಟ್ರೀಯ ನಟಿಯಾಗಿ ಮಿಂಚುತ್ತಿದ್ದಾರೆ.

ಹಲವು ಸಮಯಗಳಿಂದ ಅವರ ಅಭಿಮಾನಿಗಳು ಅವರ ಚಿತ್ರ ನಿರೀಕ್ಷಿಸುತ್ತಿದ್ದರು. ಮೂರು ವರ್ಷಗಳ ಕಾಲ ಬಾಲಿವುಡ್ ನಿಂದ ಹೊರಬಂದ ಪ್ರಿಯಾಂಕಾ ಅಮೇರಿಕದ ‘ಕ್ವಾಂಟಿಕೋ’ ಮೂರು ಸೀಸನ್ ಮತ್ತು ಮೂರು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಈಗ ಮತ್ತೆ ಹಿಂದಿ ಚಿತ್ರಕ್ಕೆ ಸಹಿ ಹಾಕಿದ್ದಾರಂತೆ. ನಟ ಸಲ್ಮಾನ್ ಖಾನ್ ಜೊತೆ ‘ಭಾರತ್’ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಇದಕ್ಕೂ ಮೊದಲು ಇವರಿಬ್ಬರು ‘ಗಾಡ್ ತುಸ್ಸಿ ಗ್ರೇಟ್ ಹೋ’ ಮತ್ತು ‘ಸಲಾಮೇ ಇಶ್ಕ್’ ಚಿತ್ರಗಳಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದರು. ಚಿತ್ರದಲ್ಲಿ ಇವರಿಬ್ಬರ ಜೋಡಿಯನ್ನು ಪ್ರೇಕ್ಷಕರು ಸಾಕಷ್ಟು ಇಷ್ಟಪಟ್ಟಿದ್ದರು.ಇದೀಗ ನಿರ್ದೇಶಕ ಅಲಿ ಅಬ್ಬಾಸ್ ಅವರ ಚಿತ್ರ’ ಭಾರತ್’ ದಲ್ಲಿ ಜೊತೆಯಾಗಿ ಕಾಣಿಸಿಕೊಳ್ಳಲಿದ್ದಾರಂತೆ. ಈಗಾಗಲೇ ಸ್ಲಮಾನ್ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದು, ಪ್ರಿಯಾಂಕಾ ಜುಲೈನಲ್ಲಿ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದಾರಂತೆ. ಇದೀಗ ಅವರು ಹಾಲಿವುಡ್ ಚಿತ್ರ ‘ಎ ಕಿಡ್ ಲೈಕ್ ಜ್ಯಾಕ್ ‘ ಚಿತ್ರದಲ್ಲಿ ಬ್ಯುಸಿ ಇದ್ದಾರಂತೆ. ‘ಭಾರತ್’ 2019ರ ಈದ್ ವೇಳೆ ತೆರೆ ಕಾಣಲಿದೆಯಂತೆ.  (ಎಸ್.ಎಚ್)

Leave a Reply

comments

Related Articles

error: