ಕರ್ನಾಟಕಮನರಂಜನೆ

ಆ ದಿನಗಳ ನೆನೆದರೆ ಕಣ್ಣೀರು ಬರುತ್ತೆ : ನವರಸನಾಯಕ ಜಗ್ಗೇಶ್

ಬೆಂಗಳೂರು,ಏ.17: ಆ ದಿನಗಳ ಹಳೆನೆನಪುಗಳನ್ನು ಮೆಲುಕು ಹಾಕುತ್ತಾ ನವರಸನಾಯಕ ಜಗ್ಗೇಶ್ ನೆನೆಸಿಕೊಂಡು ಕಣ್ಣೀರು ಬರುತ್ತದೆ ಎಂದು ಹೇಳಿದ್ದಾರೆ.

ಇತ್ತೀಚಿನ ದಿಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸದಾ ಚಟುವಟಿಕೆಯಲ್ಲಿರುವ ನವರಸನಾಯಕ ಜಗ್ಗೇಶ್  ಅಭಿಮಾನಿಗಳು ಟ್ವಿಟ್ಟರ್ ನಲ್ಲಿ ಅಂಬರೀಶ್, ರವಿಚಂದ್ರನ್, ಜಗ್ಗೇಶ್ ಹಾಗೂ ವಿಷ್ಣುವರ್ಧನ್ ಜೊತೆಯಲ್ಲಿರೋ ಹಳೆಯ ಫೋಟೋವೊಂದನ್ನು ಟ್ಯಾಗ್ ಮಾಡಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ ಜಗ್ಗೇಶ್ ಅವರು, ಮೂವರು ನನ್ನ ಛೇಡಿಸುತ್ತಿರುವುದು..!, ಅಂಬರೀಶ್ ರವರು ನಾನೇ ಜಾಸ್ತಿ ಕರಿಯ ಎಂದು.. ನಾನು ಇಲ್ಲಾ ನೀವೆ ಎಂದು.. ಆಗ ಅಂಬರೀಶ್ ಬಿಚ್ಚೋ ಶರ್ಟು ನೋಡೇಬಿಡೋಣ ಎಂದಾಗ ನಾನು ಇದು ಪಬ್ಲಿಕ್ ಅಂತ ಹೇಳಿದೆ. ಈ ವೇಳೆ ಎಲ್ಲರು ಬಿಚ್ಚು ನೋಡಣ ಎಂದಾಗಿನ ಚಿತ್ರವಾಗಿದೆ. ಆ ದಿನ ನೆನೆದರೆ ಕಣ್ಣೀರು ಬರುತ್ತದೆ. ಎಂಥ ಅದ್ಭುತ ಸಂತೋಷದ ದಿನಗಳು. ಇಂದು ಆ ಸಂತೋಷವೆಲ್ಲಾ ಇಲ್ಲ ಅಂತ ಹಳೆಯ ದಿನಗಳನ್ನು ಮೆಲುಕು ಹಾಕಿಕೊಂಡರು. (ವರದಿ: ಪಿ.ಎಸ್ )

Leave a Reply

comments

Related Articles

error: