ಮೈಸೂರು

ವಸತಿ ರಹಿತರಿಗೆ ಆಶ್ರಯ ಮನೆಗಳ ಹಂಚಿಕೆಗೆ ಆಗ್ರಹ

ಮೈಸೂರಿನಲ್ಲಿ ಆಶ್ರಯ ಮನೆಗಳನ್ನು ಸಮರ್ಪಕವಾಗಿ ಹಂಚಿಕೆಯಾಗದೆ ಕಳೆದ 20 ವರ್ಷಗಳಿಂದಲೂ ಅಲೆಯುತ್ತಿರುವ ವಸತಿ ರಹಿತರಿಗೆ ಅನ್ಯಾಯವಾಗುತ್ತಿದ್ದು ತಕ್ಷಣದಲ್ಲೇ ಆಶ್ರಯ ಮನೆಗಳ ಸಮರ್ಪಕ ಹಂಚಿಕೆಯಾಗಬೇಕೆಂದು ಎಂದು ವಕೀಲ ಸೈಯದ್ ಅಮೀರ್ ಗುರುವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

ಅವರು  ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಗರದ ಸುಮಾರು 205 ಜನ ವಸತಿ ನಿರ್ಗತಿಕರು ಹಲವಾರುಬಾರಿ ಮಹಾನಗರ ಪಾಲಿಕೆಗೆಯ ಅಧಿಕಾರಿಗಳಿಗೆ ಹಾಗೂ ಸರ್ಕಾರಕ್ಕೆ ಮನವಿ ಮಾಡಿದ್ದು, ವಿಷಯವನ್ನು ನಿರ್ಲಕ್ಷಿಸಲಾಗುತ್ತಿದೆ. ಅಧಿಕಾರಿಗಳ ಲಂಚದ ಅಮಿಷಕ್ಕೆ ಬಲಿಯಾಗಿರುವ ನಿವಾಸಿಗಳು ಆಶ್ರಯ ಸಮಿತಿ ವ್ಯವಸ್ಥಾಪಕ ಸದಸ್ಯ ಕುಮಾರಸ್ವಾಮಿ ಹಾಗೂ ಗೋಪಾಲ ಅವರಿಗೆ ಸುಮಾರು 25 ಲಕ್ಷದವರೆಗೂ ಲಂಚವನ್ನು ನೀಡಿದ್ದಾರೆ ಎಂದು ಆಪಾದಿಸಿದರು. ಲಂಚ ಪಡೆದ ಅಧಿಕಾರಿಗಳು ಈ ಬಗ್ಗೆ ತಲೆಕಡೆಸಿಕೊಂಡಿಲ್ಲ. ನಿರ್ಗತಿಕರಿಗೆ ಮನೆಯನ್ನು ನೀಡಿಲ್ಲ. ಇನ್ನೂ ಕೆಲವರಿಗೆ ಮನೆ ಮಂಜೂರಾಗಿದ್ದರು ಹಂಚಿಕೆ ಮಾಡಿಲ್ಲ ಎಂದು ಆರೋಪಿಸಿದರು.

ಮೈಸೂರಿನ ಶಾರದಾದೇವಿನಗರ, ರಮಾಬಾಯಿನಗರ, ಕಲ್ಯಾಣಗಿರಿ, ಹೆಬ್ಬಾಲ, ಲಕ್ಷ್ಮೀಕಾಂತ ನಗರ, ದಟ್ಟಗಳ್ಳಿ, ನೆಹರೂ ನಗರ ಮುಂತಾದ ಕಡೆ ಆಶ್ರಯ ಮನೆಗಳು ಖಾಲಿಯಿದ್ದು ವಸತಿ ರಹಿತರಿಗೆ ನೀಡಬೇಕು ಎಂದು ಒತ್ತಾಯಿಸಿದರು.

ಸಂತ್ರಸ್ತ ಕುಮಾರಸ್ವಾಮಿ ಮಾತನಾಡಿ, ಕಳೆದ 20 ವರ್ಷಗಳಿಂದಲೂ ಬಾಡಿಗೆ ಮನೆಯಲ್ಲಿದ್ದು ವರ್ಷ ವರ್ಷ ಮನೆಯಿಂದ ಮನೆಗೆ ಅಲೆಯುವುದಾಯಿತು. ಅಲ್ಲದೇ ನೋಟು ಅಮಾನ್ಯಗೊಂಡಿದ್ದರಿಂದ ಕೂಲಿಯು ದುರ್ಲಭವಾಗಿದ್ದು ಕಷ್ಟದಿಂದ ಬದುಕು ನೂಕುವಂತಾಗಿದೆ ಎಂದು ತಮ್ಮ ಅಳಲು ತೋಡಿಕೊಂಡರು.

ಸುದ್ದಿಗೋಷ್ಠಿಯಲ್ಲಿ ಗಯಾಸ್ಸುದೀನ್,  ನಂದಕುಮಾರ್, ಕೃಷ್ಣ, ಆರೀಫಾ ಬೇಗಂ ಹಾಗೂ ಇತರರು ಉಪಸ್ಥಿತರಿದ್ದರು.

Leave a Reply

comments

Related Articles

error: