ಸುದ್ದಿ ಸಂಕ್ಷಿಪ್ತ
ಏ.20ಕ್ಕೆ ಉಚಿತ ಆರೋಗ್ಯ ತಪಾಸಣಾ ಶಿಬಿರ
ಮೈಸೂರು,ಏ.17 : ರೂಪಾನಗರದ ಅಮೃತ ಕೃಪಾ ಆಸ್ಪತ್ರೆ ವತಿಯಿಂದ ಉಚಿತ ಮಲ್ಟಿ ಸ್ಪೆಷಾಲಿಟಿ ಆರೋಗ್ಯ ತಪಾಸಣಾ ಶಿಬಿರವನ್ನು ಏ.20ರಂದು ಬೆಳಗ್ಗೆ 9 ರಿಮದ ಮಧ್ಯಾಹ್ನ 2ರವರೆಗೆ ಆಯೋಜಿಸಿದೆ.
ಶಿಬಿರದಲ್ಲಿ ಮಧುಮೇಹ, ಥೈರಾಯಿಡ್, ಬೋನ್ ಮಿನರಲ್ ಡೆನ್ಸಿಟಿ ಮುಂತಾದ ತಪಾಸಣೆ ನಡೆಸಲಾಗುವುದು. ಇದರೊಂದಿಗೆ ರಕ್ತದಲ್ಲಿ ಸಕ್ಕರೆ, ಟಿ.ಎಸ್.ಎಚ್. ಇಸಿಜಿ ಪರೀಕ್ಷೆಯೂ ಇರುವುದು. ಜತೆಗೆ ತಿಂಗಳ ಕಾಲ ಹೊರರೋಗಿ ಸಮಾಲೋಚನೆ ನಡೆಲಾಗುವುದು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. (ಕೆ.ಎಂ.ಆರ್)