ಮೈಸೂರು

ಮೂಲಭೂತ ಸೌಲಭ್ಯ ವಂಚಿತ ಮರಸೆ ಗ್ರಾಮಸ್ಥರಿಂದ ಮತದಾನ ಬಹಿಷ್ಕಾರ

ಮೈಸೂರು,ಏ.17 : ಮೂಲಸೌಲಭ್ಯ ವಂಚಿತ ಮರಸೆ ಗ್ರಾಮಸ್ಥರು ಮತದಾನ ಬಹಿಷ್ಕರಿಸಲು ಮುಂದಾಗಿದ್ದು, ಮುಂಬರುವ ಚುನಾವಣೆಯಲ್ಲಿ ಮತದಾನದಿಂದ ದೂರು ಉಳಿಯುವ ಬಗ್ಗೆ ಹೇಳಿಕೆ ನೀಡಿದ್ದಾರೆ.

ಈಚೆಗೆ ನಡೆದ ಗ್ರಾಮಸ್ಥರ ಸಭೆಯಲ್ಲಿ ಸರ್ವ ಸಮ್ಮತಿಯಿಂದ ಮತದಾನ ಬಹಿಷ್ಕಾರ ನಿರ್ಣಯ ಕೈಗೊಳ್ಳಲಾಗಿದೆ, ಅಲ್ಲದೇ ಇದುವರೆಗೂ ಯಾವೊಬ್ಬ ನಾಯಕರು ಮೂಲಭೂತ ಸೌಲಭ್ಯಗಳನ್ನು ಒದಗಿಸಿಲ್ಲ, ಕೇವಲ ಚುನಾವಣಾ ವೇಳೆಯಲ್ಲಿ ಮಾತ್ರ ಪ್ರಚಾರಕ್ಕೆ ಬರುವರು ನಂತರ ತಮಗೆ ಯಾವುದೇ ಸವಲತ್ತು ನೀಡಿಲ್ಲವೆಂದು ದೂರಿದ್ದಾರೆ.

ಈ ಹಿಂದೆ ಸರ್ಕಾರಿ ವಸತಿ ಯೋಜನೆಯಡಿ ನೀಡಿದ್ದ ಹಕ್ಕು ಪತ್ರಗಳಿಗೆ ನಿವೇಶನದ ಸ್ವಾಧೀನ ಕೊಟ್ಟಿಲ್ಲ, ಅಲ್ಲದೇ ಗ್ರಾಮ ಠಾಣಾ ಜಾಗವನ್ನು ಕಾನೂನು ಬಾಹಿರವಾಗಿ ಭೂ ಕಂದಾಯ ಜಮೀನನ್ನಾಗಿ ಪರಿವರ್ತಿಸಿ ಅಧಿಕಾರಿಗಳು ವಿಲೇವಾರಿ ಮಾಡಿದ್ದಾರೆ. ಅಲ್ಲದೇ ಭೂ ಮಾಲೀಕ ಸಿದ್ದೇಗೌಡ ಅವರಿಗೆ ಕಾನೂನು ಬಾಹಿರ ಪಂಚಾಯ್ತಿ ಖಾತೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಅಲ್ಲದೇ ತಮಗೆ ಸೂರಿಲ್ಲ ಹಾಗೂ ಉದ್ಯೋಗವಿಲ್ಲ ತಮ್ಮ ಬಗ್ಗೆ ಸರ್ಕಾರ ತಳೆದಿರುವ ಧೋರಣೆ ಖಂಡಿಸಿ ಮತದಾನ ಬಹಿಷ್ಕರಿಸಲಾಗಿದೆ ಎಂದು ಮುಖ್ಯ ಚುನಾವಣಾಧಿಕಾರಿಗಳಿಗೆ, ಚುನಾವಣಾ ಆಯುಕ್ತರಿಗೆ, ವರುಣಾ ಕ್ಷೇತ್ರದ ಚುನಾವಣಾಧಿಕಾರಿಗೆ, ಪೊಲೀಸ್ ವರಿಷ್ಠಾಧಿಕಾರಿಗೆ  ಹೇಳಿಕೆ ನೀಡಿ ಮೂಲಕ ಮನವಿ ಸಲ್ಲಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: