ಸುದ್ದಿ ಸಂಕ್ಷಿಪ್ತ
ನಾಳೆ ಬಿಜೆಪಿ ಚುನಾವಣಾ ಕೇಂದ್ರ ಕಚೇರಿ ಉದ್ಘಾಟನೆ
ಮೈಸೂರು,ಏ.17 : ಬಿಜೆಪಿಯ ಜಿಲ್ಲಾ ಚುನಾವಣಾ ಕೇಂದ್ರ ಕಚೇರಿಯನ್ನು #90, ಎನ್.ಜಿ.ಓ ಸ್ ಕಾಲೋನಿ, ರಾಜೇಂದ್ರ ನಗರದಲ್ಲಿ ಏ.18ರಂದು ಬೆಳಗ್ಗೆ 11.30ಕ್ಕೆ ಬಿಜೆಪಿ ಉಪಾಧ್ಯಕ್ಷ ವಿ.ಶ್ರೀನಿವಾಸ ಪ್ರಸಾದ್ ಉದ್ಘಾಟಿಸುವರು.
ಕಾರ್ಯಕ್ರಮದಲ್ಲಿ ಬಿ.ವೈ.ವಿಜಯೇಂದ್ರ, ಸಂದೇಶ ಸ್ವಾಮಿ, ಪಕ್ಷದ ನಾಯಕರು, ದಲಿತ ಮುಖಂಡರು ಇರುವರು, ಅದೇ ಸಂಜೆ 6ಕ್ಕೆ ಅರಮನೆ ಮುಂಭಾಗ ಸ್ವಾಭಿಮಾನಿ ವಾಹಿನಿ ಪ್ರಚಾರದ ವಾಹನಕ್ಕೆ ಚಾಲನೆ ನೀಡಲಾಗುವುದು. (ಕೆ.ಎಂ.ಆರ್)