ಕರ್ನಾಟಕ

ಹಾಸನ ಜಿಲ್ಲಾಧಿಕಾರಿಯಾಗಿ ಡಿ.ರಂದೀಪ್ ಅಧಿಕಾರ ಸ್ವೀಕಾರ

ರಾಜ್ಯ(ಹಾಸನ)ಏ.17:-  ರಾಜ್ಯ ಸರ್ಕಾರದ ವರ್ಗಾವಣೆ ಆದೇಶ ಪ್ರಶ್ನಿಸಿ ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಹಿನ್ನೆಲೆ  ಹಾಸನ ಜಿಲ್ಲಾಧಿಕಾರಿಯಾಗಿ ಐಎಎಸ್ ಅಧಿಕಾರಿ ಡಿ.ರಂದೀಪ್ ಅವರು ಅಧಿಕಾರ ಸ್ವೀಕರಿಸಿದ್ದಾರೆ.

ಹಾಸನಾಂಬೆಯ ಆಶಿರ್ವಾದ ಪಡೆದು ಜಿಲ್ಲಾದಿಕಾರಿ ಕಛೇರಿಗೆ  ಡಿ.ರಂದೀಪ್ ಎಂಟ್ರಿಕೊಟ್ಟರು. ಮೈಸೂರು ಜಿಲ್ಲಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ರಂದೀಪ್ ಅವರನ್ನ ಹಾಸನ ಡಿಸಿ ಆಗಿ ಸರ್ಕಾರ ವರ್ಗಾವಣೆ ಮಾಡಿತ್ತು. ಇನ್ನು ಹಾಸನ ಡಿಸಿ ರೋಹಿಣಿ ಸಿಂಧೂರಿ ಅವರನ್ನ ಬೇರೆಡೆಗೆ ವರ್ಗಾವಣೆ ಮಾಡಲಾಗಿತ್ತು. ಆದರೆ ಅವಧಿಗೂ ಮುನ್ನ ವರ್ಗಾವಣೆಯನ್ನ ಪ್ರಶ್ನಿಸಿ ರೋಹಿಣಿ ಸಿಂಧೂರಿ ಅವರು ಸಿಎಟಿ ಮೊರೆ ಹೋಗಿದ್ದರು. ಇದರಿಂದ ಅತ್ತ ಹಾಸನದಲ್ಲೂ ಹುದ್ದೆ ಇಲ್ಲದೆ. ಮೈಸೂರಿನಲ್ಲೂ ಹುದ್ದೆ ಇಲ್ಲದೆ ಡಿ ರಂದೀಪ್ ಸುಮ್ಮನೆ ಕುಳಿತಿದ್ದರು. ಇದೀಗ ಡಿಸಿ ರೋಹಿಣಿ ಸಿಂಧೂರಿ ಅವರ ಅರ್ಜಿಯನ್ನು ಸಿಎಟಿ ವಜಾಗೊಳಿಸಿ ಹಾಸನ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸುವಂತೆ ರಂದೀಪ್ ಅವರಿಗೆ ಸೂಚಿಸಿತ್ತು. ಸಿಎಟಿ ಆದೇಶದಂತೆ ಇಂದು  ರಂದೀಪ್ ಅವರು ಅದಿಕಾರ‌ ಸ್ವೀಕರಿಸಿದ್ದಾರೆ.  ಮೈಸೂರಿನಿಂದ‌ ವರ್ಗಾವಾದ ಬಳಿಕ ಹುದ್ದೆಯಿಲ್ಲದೆ ಕುಳಿತಿದ್ದ  ಒಂದುವರೆ ತಿಂಗಳ ಬಳಿಕ ಮತ್ತೆ ಡಿಸಿ‌ ಹುದ್ದೆಗೇರಿದ್ದಾರೆ. ಇನ್ನು ರೋಹಿಣಿ ಸಿಂಧೂರಿ ಅವರು ಅಧಿಕಾರ ಹಸ್ತಾಂತರಕ್ಕೆ ಬಾರದ ಹಿನ್ನೆಲೆ ಎಡಿಸಿ ಪೂರ್ಣಿಮಾ ಅವರಿಂದ ‌ರಂದೀಪ್ ಅಧಿಕಾರ ಸ್ವೀಕರಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: