ಸುದ್ದಿ ಸಂಕ್ಷಿಪ್ತ

ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಿಂದ ನೋಂದಣಿ

ಮೈಸೂರು, ಏ.18:-  ಕೃಷಿ ಮಾರಾಟ ಇಲಾಖೆಯ ಕೃಷಿ ಮಾರಾಟ ನೀತಿ-2013ರನ್ವಯ ಮೈಸೂರು ಜಿಲ್ಲೆಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳ ವತಿಯಿಂದ ರೈತ ನೋಂದಣಿ ಕಾರ್ಯ ಕೈಗೊಳ್ಳಲು ಸಂಘ ಸಂಸ್ಥೆಗಳನ್ನೊಳಗೊಂಡ ಸ್ವಯಂ ಸೇವಾ ಸಂಸ್ಥೆಗಳಿಗೆ ಆದೇಶ ನೀಡಲಾಗಿತ್ತು.

ರೈತ ನೋಂದಣಿ ಕಾರ್ಯಕ್ಕೆ ಯಾವುದೇ ರೀತಿಯ ಹಣವನ್ನು ರೈತರಿಂದ ವಸೂಲಿ ಮಾಡಬಾರದಾಗಿರುತ್ತದೆ. ಆದರೆ ಪ್ರಸ್ತುತ ಪರಿಶೀಲಿಸಲಾಗಿ, ಕೆಲವೊಂದು ಸಂಸ್ಥೆಯವರು ರೈತ ನೋಂದಣೆ ಮಾಡಿಕೊಳ್ಳಲು ಅನಧಿಕೃತವಾಗಿ ಹಣ ವಸೂಲಿ ಮಾಡುತ್ತಿರುವುದು ಹಾಗೂ ರೈತ ಕುಟುಂಬದ ಎಲ್ಲಾ ಸದಸ್ಯರನ್ನು ಮಕ್ಕಳನ್ನೊಳಗೊಂಡಂತೆ ನೋಂದಣಿ ಮಾಡುತ್ತಿರುವುದು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಸದರಿ ಸಂಸ್ಥೆಗಳ ನೋಂದಣಿ ಕಾರ್ಯ ಆದೇಶ ರದ್ದುಪಡಿಸಲಾಗಿದೆ. ರೈತರು ತಮ್ಮ ಸಮೀಪದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಿಂದಲೇ ರೈತ ನೋಂದಣಿ ಮಾಡಿಕೊಳ್ಳಲು ಕೃಷಿ ಮಾರುಕಟ್ಟೆ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.  (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: