ಸುದ್ದಿ ಸಂಕ್ಷಿಪ್ತ

ಹೊರಗುತ್ತಿಗೆ ಮೇಲೆ ನೋಂದಾಯಿತ ಅಂಚೆ ಸೇವೆ

ಮೈಸೂರು, ಏ.18:-  ಗ್ರ್ರಾಹಕರ  ಮನೆಬಾಗಿಲಿಗೆ ಅಂಚೆ ಸೇವೆಯನ್ನು  ತಲುಪಿಸುವ  ಸಲುವಾಗಿ  ಅಂಚೆ ಇಲಾಖೆಯು ನೋಂದಾಯಿತ  ಅಂಚೆ  ಸೇವೆಯನ್ನು [ ರಿಜಿಸ್ಟರ್ಡ್, ಸ್ಪೀಡ್ ಪೋಸ್ಟ್,  ವ್ಯಾವಹಾರಿಕಪಾರ್ಸೆಲ್ ]  ಹೊರಗುತ್ತಿಗೆಗೆ ಕೊಡಲು ತೀರ್ಮಾನಿಸಿದೆ.
ಹೊರಗುತ್ತಿಗೆ  ಸೇವಾ ಏಜೆಂಟರು ತಮಗೆ ನಿಗದಿಪಡಿಸಿದ ಬಡಾವಣೆಗಳಲ್ಲಿ ನೋಂದಾಯಿತ  ಅಂಚೆಯನ್ನು ಸಂಗ್ರಹಿಸಬೇಕು. ಸಂಗ್ರಹಗೊಂಡ  ಪತ್ರಗಳನ್ನು  ನೋಂದಾಯಿಸುವುದು[ಬುಕಿಂಗ್],  ಬಟವಾಡೆಗಾಗಿ ಬಂದ ನೋಂದಾಯಿತ ಪತ್ರಗಳನ್ನು  ಸಂಬಂಧಪಟ್ಟ ಗ್ರಾಹಕರಿಗೆ ವಿತರಿಸುವುದು ಹಾಗೂ ಎಲ್ಲಾ ಕೆಲಸಗಳನ್ನೂ  ನಿಗದಿತ  ಸಮಯದಲ್ಲಿ ಆನ್ ಲೈನ್ ನಲ್ಲಿ ಅಪ್ ಲೋಡ್ ಮಾಡುವುದು ಇರುತ್ತದೆ.  ಏಜೆಂಟರನ್ನು  ಯಾವುದಾದರೂ ಅಂಚೆ  ಕಛೇರಿಗೆ ಜೋಡಣೆ ಮಾಡಲಾಗುತ್ತಿದ್ದು,  ಅವರ ಎಲ್ಲಾ ವಹಿವಾಟುಗಳು  ಆ ಅಂಚೆ  ಕಛೇರಿಗೆ ಉತ್ತರದಾಯಿತ್ವದ್ದಾಗಿರುತ್ತವೆ.  ಸಂಬಂಧಿಸಿದ  ಸಹಾಯಕ  ಅಂಚೆ  ಅಧೀಕ್ಷಕರು ಅಥವಾ ಹಿರಿಯ ಅಂಚೆ  ಅಧೀಕ್ಷಕರು ಈ ವಿಷಯದಲ್ಲಿ ತೀರ್ಮಾನವನ್ನು  ಕೈಗೊಳ್ಳುವರು. ಅಂಚೆ  ಇಲಾಖೆಯ ನೌಕರರ  ಕುಟುಂಬದ ಸದಸ್ಯರ ಹೊರತಾಗಿ  ಯಾರೇ ಆದರೂ ಕಮಿಷನ್ ಆಧಾರದಲ್ಲಿ ಕೆಲಸಮಾಡುವ  ಅಂಚೆ  ಹೊರ ಗುತ್ತಿಗೆ ಏಜೆಂಟರಾಗಬಹುದು. ಅಥವಾ ಪಾಲುದಾರಿಕಾ  ಸಂಸ್ಠೆ , ಕಾನೂನಾತ್ಮಕವಾಗಿ ಸ್ಥಾಪನೆಗೊಂಡ ಯಾವುದೇ  ಕಂಪೆನಿ  ಹೊರಗುತ್ತಿಗೆ  ಏಜೆನ್ಸಿಯನ್ನು ಪಡೆಯಬಹುದಾಗಿದೆ. ಆಸಕ್ತರು ಹಿರಿಯ ಅಂಚೆ  ಅಧೀಕ್ಷಕರ ಕಛೇರಿ, ಯಾದವಗಿರಿ,  ಮೈಸೂರು  -570020- ಇಲ್ಲಿಗೆ ದೂರವಾಣಿ ಸಂಖ್ಯೆ: 0821-2417307, 2417308 ನ್ನು ಸಂಪರ್ಕಿಸಬಹುದು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: