ಮೈಸೂರು

ದೇವನೂರು ಕೆರೆ ಉಳಿಸಿಕೊಡುವಂತೆ ಒತ್ತಾಯಿಸಿ ಪ್ರತಿಭಟನೆ

devanuru-lake-webದೇವನೂರು ಕೆರೆ ರಕ್ಷಣಾ ಸಮಿತಿ ವತಿಯಿಂದ ಗುರುವಾರ ದೇವನೂರು ಕೆರೆ ಉಳಿಸಿಕೊಡುವಂತೆ ಒತ್ತಾಯಿಸಿ ಶಾಂತಿಯುತ ಪ್ರತಿಭಟನೆ ನಡೆಯಿತು.

ದೇವನೂರು ಕೆರೆಯ ಬಳಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರತಿಭಟನಾಕಾರರು ಅಧಿಕಾರಿಗಳ ಬೇಜವಾಬ್ದಾರಿಯಿಂದ ಕೆರೆ ಅವಸಾನದ ಅಂಚಿನಲ್ಲಿದೆ ಎಂದು ಆರೋಪಿಸಿದರು. ಒಂದು ಕಾಲದಲ್ಲಿ ಇಲ್ಲಿ ವಲಸೆ ಹಕ್ಕಿಗಳ ತಂಗುದಾಣವಾಗಿದ್ದ ಈ ಕೆರೆ ಈಗ ರೊಚ್ಚು ಗುಂಡಿಯಾಗಿದೆ. ಗೌಸಿಯಾನಗರ, ಶಾಂತಿನಗರ, ಉದಯಗಿರಿ, ರಾಜೀವನಗರ, ಎನ್.ಆರ್. ಮೊಹಲ್ಲಾ ಮತ್ತು ಸುತ್ತಮುತ್ತಲಿನ ಬಡಾವಣೆಗಳಿಂದ ಬರುವ ಮಳೆ ನೀರಿನ ಜೊತೆಯಲ್ಲಿ ಒಳಚರಂಡಿ ನೀರನ್ನೂ ಬಿಡಲಾಗುತ್ತಿದ್ದು, ಕಲುಷಿತಗೊಳ್ಳುತ್ತಿದೆ. ಕೆರೆಯ ಅವನತಿಯಿಂದ ಸುತ್ತಮುತ್ತಲಿನ ನಿವಾಸಿಗಳಿಗೆ ಸಾಂಕ್ರಾಮಿಕ ರೋಗಗಳು ಕಾಣಿಸಿಕೊಳ್ಳುತ್ತಿದ್ದು, ಸೊಳ್ಳೆಗಳ ಹಾವಳಿ ಹೆಚ್ಚಿತ್ತಿದೆ ಎಂದು ಆರೋಪಿಸಿದರು.

ಕೆರೆಯ ಉಳಿವಿಗಾಗಿ ನಾವು ಸತತ ಪ್ರಯತ್ನ ಮಾಡಲು ಬದ್ಧರಾಗಿದ್ದು, ಯಾವುದೇ ಪ್ರಯೋಜನವಾಗದಿದ್ದಲ್ಲಿ ಪ್ರತಿಭಟನೆಯನ್ನು ಉಗ್ರ ರೂಪದಲ್ಲಿ ಮಾಡಲಾಗುವುದು ಎಂದು ಪ್ರತಿಭಟನಾಕಾರರು ತಿಳಿಸಿದರು.

ಪ್ರತಿಭಟನೆಯಲ್ಲಿ ಸಮಿತಿಯ ಸಂಚಾಲಕ ಮೊಹಮ್ಮದ್ ಅಜಹರ್, ಮೊಹಮದ್ ಜಹೀರ್ ಉಲ್ ಹಖ್ ಸೇರಿದಂತೆ ನೂರಾರು ಸಮಿತಿಯ ಸದಸ್ಯರು ಪಾಲ್ಗೊಂಡಿದ್ದರು.

Leave a Reply

comments

Related Articles

error: