
ಕರ್ನಾಟಕ
ಜಿಲ್ಲೆಯ ಐದು ನಾಯಕ ಮುಖಂಡರಿಗೆ ಸೂಕ್ತ ಸ್ಥಾನಮಾನ ಕೊಡಬೇಕು : ಬಿಜೆಪಿಗೆ ನಾಯಕ ಜನಾಂಗದ ಮುಖಂಡರ ಎಚ್ಚರಿಕೆ
ರಾಜ್ಯ(ಚಾಮರಾಜನಗರ)ಏ.18:- ಜಿಲ್ಲಾ ಪಂಚಾಯತ್ ಅಧ್ಯಕ್ಷ ಎಂ.ರಾಮಚಂದ್ರು ಅವರಿಗೆ ಬಿಜೆಪಿ ಅನೇಕ ಆಮಿಷಗಳನ್ನು ಒಡ್ಡಿ ಬಿಜೆಪಿಗೆ ಕರೆತಂದು ಮೋಸ ಮಾಡಿದೆ ಎಂದು ನಾಯಕ ಜನಾಂಗದ ಮುಖಂಡರು ಆರೋಪಿಸಿದ್ದಾರೆ.
ಈ ಕುರಿತು ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಜಿಲ್ಲೆಯಲ್ಲಿ ಒಂದು ಲಕ್ಷದ 25 ಸಾವಿರ ನಾಯಕ ಜನಾಂಗದ ಮತಗಳಿದ್ದು ನಾವೇ ನಿರ್ಣಾಯಕವಾಗಿದ್ದೇವೆ. ಬಿಜೆಪಿ, ಜಿಲ್ಲೆಯ ಐದು ನಾಯಕ ಮುಖಂಡರಿಗೆ ಸೂಕ್ತ ಸ್ಥಾನಮಾನ ಕೊಡಬೇಕು. ಮೈಸೂರಿನ ಮುಖಂಡ ಅಪ್ಪಣ್ಣ ಅವರನ್ನೂ ಪರಿಗಣನೆಗೆ ತೆಗೆದುಕೊಳ್ಳಬೇಕು.ಜಿಲ್ಲೆಯಲ್ಲಿ ಎಸ್.ಟಿ ಮೀಸಲು ಕೋಟಾ ಜಾರಿ ಮಾಡಬೇಕು. ಇಲ್ಲದೇ ಹೋದ್ರೆ ಜಿಲ್ಲೆಯಾದ್ಯಂತ ನಾಯಕ ಮತದಾರರು ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳುತ್ತೇವೆ ಎಂದು ಬಿಜೆಪಿಗೆ ಎಚ್ಚರಿಕೆಯನ್ನು ರವಾನಿಸಿದ್ದಾರೆ. (ಕೆ.ಎಸ್,ಎಸ್.ಎಚ್)