ಸುದ್ದಿ ಸಂಕ್ಷಿಪ್ತ
ಎನ್.ಎಸ್.ಎಸ್. ಶಿಬಿರ
ಮಂಚೇನಗೌಡನ ಕೊಪ್ಪಲು ಸರ್ಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯಸೇವಾ ಯೋಜನೆಯ ವಾರ್ಷಿಕೋತ್ಸವ ಶಿಬಿರವನ್ನು ಡಿ.2 ರಿಂದ 8ರವರೆಗೆ, ಹುಣಸೂರು ರಸ್ತೆಯ ಶ್ರೀರಾಮಚಂದ್ರ ಮಿಷನ್ ಆಧ್ಯಾತ್ಮಿಕ ತರಬೇತಿ ಕೇಂದ್ರದಲ್ಲಿ ಆಯೋಜಿಸಲಾಗಿದೆ.
ಶಿಬಿರವನ್ನು ದಿ.2ರಂದು ಬೆಳಿಗ್ಗೆ 11ಕ್ಕೆ ಪ್ರಾಧ್ಯಾಪಕ ರಾಮದಾಸ ರೆಡ್ಡಿ ಉದ್ಘಾಟಿಸುವರು, ಪ್ರಾಂಶುಪಾಲ ಸೈಯದಹಲೀಮ ಅಧ್ಯಕ್ಷತೆ ವಹಿಸುವರು. ವಿದ್ಯಾರ್ಥಿಗಳಿಗೆ ಪ್ರತಿದಿನ ವಿಶೇಷ ಉಪನ್ಯಾಸವನ್ನು ಏರ್ಪಡಿಸಲಾಗಿದೆ.
ಡಿ.8ರಂದು ಬೆಳಿಗ್ಗೆ 10ಕ್ಕೆ ಸಮಾರೋಪ ಸಮಾರಂಭವಿದ್ದು ಪ.ಪೂ ಶಿಕ್ಷಣ ಇಲಾಖೆ ಉಪನಿರ್ದೇಶಕ ಜಯಪ್ರಕಾಶ್ ಅಧ್ಯಕ್ಷತೆ ವಹಿಸುವರು, ಸಮಾರೋಪ ಭಾಷಣವನ್ನು ಲಯನ್ ಎಂ.ಎನ್.ಶಿವಣ್ಣ ಮಾಡುವರು.