ಸುದ್ದಿ ಸಂಕ್ಷಿಪ್ತ
ಶ್ರೀದೊಡ್ಡಮ್ಮತಾಯಿ ಉತ್ಸವ
ಶ್ರೀದೊಡ್ಡಮ್ಮತಾಯಿ ಸೇವಾ ಟ್ರಸ್ಟ್ನ 17ನೇ ವರ್ಷದ ವಾರ್ಷಿಕೋತ್ಸವವು ಡಿ.8ರಂದು ಬೆಳಿಗ್ಗೆ 9ಗಂಟೆಗೆ ನಡೆಯಲಿದ್ದು ಅವದೂತ ದತ್ತ ಪೀಠಾಧಿಪತಿ ದತ್ತ ವಿಜಯಾನಮದ ಸ್ವಾಮೀಜಿ ಸಾನಿಧ್ಯವಹಿಸುವರು, ಈ ಸಂದರ್ಭದಲ್ಲಿ ದೇವಿಗೆ ಪಂಚಾಮೃತ ಅಭಿಷೇಕ, ಗಣಪತಿ-ನವಗ್ರಹ ಹೋಮಗಳು, ಪೂರ್ಣಾಹುತಿ, ಮಂಗಳಾರತಿ ಹಾಗೂ ಪ್ರಸಾದ ವಿನಿಯೋಗವಿದೆ. ಸಂಜೆ 6ಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ಜಾನಪದ ಕಲಾತಂಡಗಳಿಂದ ಉತ್ಸವ ಹಾಗೂ ರಾತ್ರಿ 9ಕ್ಕೆ ದೇವಿಗೆ ಉಯ್ಯಾಲೆ ಪೂಜೆ ನಡೆಯುವುದು.