ಸುದ್ದಿ ಸಂಕ್ಷಿಪ್ತ
ಕಾರ್ಮಿಕರಿಗೆ ಕಡ್ಡಾಯ ಬ್ಯಾಂಕ್ ಖಾತೆ
ಅಸಂಘಟಿತ ಕಾರ್ಮಿಕರು ಕಡ್ಡಾಯವಾಗಿ ಬ್ಯಾಂಕ್ ಖಾತೆ ಹೊಂದಿಬೇಕು ಹಾಗೂ ಝಿರೋ ಬ್ಯಾಲೆನ್ಸ್ನಲ್ಲಿ ಬ್ಯಾಂಕ್ ಖಾತೆ ತೆರೆಯಬಹುದು ಎಂದು ಕರ್ನಾಟಕ ರಾಜ್ಯ ಕಾರ್ಮಿಕರ ಹಾಗೂ ದಿನಗೂಲಿ ಕಾರ್ಮಿಕರ ಸಂಘವು ತಿಳಿಸಿದೆ. ಬ್ಯಾಂಕಿನ ಅರ್ಜಿಗಳು ಸಂಘದಲ್ಲಿ ದೊರೆಯುತ್ತಿದ್ದು 3 ಪಾಸ್ ಪೋರ್ಟ್ ಅಳತೆಯ ಭಾವಚಿತ್ರ ಹಾಗೂ ವೋಟರ್ ಐಡಿ, ಆಧಾರ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್ ಅಥವಾ ಪಾನ್ ಕಾರ್ಡ್ ಇವುಗಳ ದಾಖಲೆಗಳ ಜೆರಾಕ್ಸ್ ನೊಂದಿಗೆ ಬರಬೇಕು. ಅರ್ಜಿಗಾಗಿ ಸಂಪರ್ಕಿಸಬೇಕಾದ ವಿಳಾಸ ಪಿ.ರಾಜಪ್ಪ, ರಾಜ್ಯಾಧ್ಯಕ್ಷರು, ಕರ್ನಾಟಕ ರಾಜ್ಯ ಕಾರ್ಮಿಕರ ಹಾಗೂ ದಿನಗೂಲಿ ಕಾರ್ಮಿಕರ ಸಂಘ(ರಿ) #31, ಮೊದಲನೆ ಮಹಡಿ, ಆರ್.ಎಂ.ಪಿ ಕಾಲೋನಿ, ಆದಿಚುಂಚನಗಿರಿ ರಸ್ತೆ, ಕುವೆಂಪುನಗರ, ಮೈಸೂರು. ಹೆಚ್ಚಿನ ಮಾಹಿತಿಗಾಗಿ 0821-4191266, 9141614633, 9738151019 ಅನ್ನು ಸಂಪರ್ಕಿಸಿ.