ಕರ್ನಾಟಕಪ್ರಮುಖ ಸುದ್ದಿ

ಟೀ ಮಾರುತ್ತಿದ್ದವನ ಆಸ್ತಿಯೀಗ 339 ಕೋಟಿ ರೂ ಎಂದು ಘೋಷಣೆ!

ಬೆಂಗಳೂರು (ಏ.19): ಸ್ವಲ್ಪ ವರ್ಷಗಳ ಹಿಂದೆ ಟೀ ಮಾರುತ್ತಿದ್ದ ವ್ಯಕ್ತಿಯೊಬ್ಬರು ಚುನಾವಣೆಯಲ್ಲಿ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿದ್ದು, ಈ ವೇಳೆ ಅವರು ತಮ್ಮ ಆಸ್ತಿಯನ್ನು 339 ಕೋಟಿ ರೂ.ಗಳು ಎಂದು ಘೋಷಣೆ ಮಾಡಿದ್ದಾರೆ.

ವಿಧಾನಸಭೆ ಚುನಾವಣೆಯಲ್ಲಿ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿಯಾಗಿರುವ 43 ವರ್ಷದ ಡಾ.ಪಿ.ಅನಿಲ್ ಕುಮಾರ್ ಅವರೇ ಈ ಆಸ್ತಿ ಘೋಷಿಸಿಕೊಂಡವರು.

35 ವರ್ಷಗಳ ಹಿಂದೆ ಕೇರಳದಿಂದ ಬೆಂಗಳೂರಿಗೆ ವಲಸೆ ಬಂದು ಸಣ್ಣ ಟೀ ಅಂಗಡಿಯಲ್ಲಿ ಕೆಲಸ ಆರಂಭಿಸಿದ್ದ ಅವರು, ನಂತರ ಸ್ವತಃ ಟೀ ಕ್ಯಾಟರಿಂಗ್ ಆರಂಭಿಸಿದರು. ಬಳಿಕ ಸ್ವಂತ ಮನೆ ನಿರ್ಮಾಣಕ್ಕಾಗಿ ಗಾರೆಭಾವಿಪಾಳ್ಯದಲ್ಲಿ ಜಾಗ ಖರೀಸಿದ್ದರು. ಅದರ ಮುಂದೆಯೇ ಇದ್ದ ಜಮೀನು ಖರೀದಿಸಿ ನಿವೇಶನವಾಗಿ ಪರಿವರ್ತಿಸಿ ಮಾರಾಟ ಮಾಡಿ ರಿಯಲ್ ಎಸ್ಟೇಟ್ ಉದ್ಯಮ ಆರಂಭಿಸಿದರು. ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ದೊರೆತ ಯಶಸ್ಸು ಅವರನ್ನು ರಾಜಕೀಯಕ್ಕೆ ಎಳೆತಂದಿದೆ.

ಕೇರಳದ ತಿರುವನಂತಪುರಂನಲ್ಲಿ ಜನಿಸಿದ ಅನಿಲ್ ಅವರು, ಕೌಟುಂಬಿಕ ಸಂಕಷ್ಟದಿಂದಾಗಿ 3ನೇ ತರಗತಿಗೇ ವಿದ್ಯಾಭ್ಯಾಸ ನಿಲ್ಲಿಸಿ ದುಡಿಯಲು ಆರಂಭಿಸಿದ ಅವರು, ಇಟ್ಟಿಗೆಗೂಡಿನಲ್ಲಿ 100 ಇಟ್ಟಿಗೆ ಹೊತ್ತು ದಿನಕ್ಕೆ 2 ರು. ಸಂಪಾದಿಸುತ್ತಿದ್ದರು. ಬಳಿಕ ಮುಂಬೈಗೆ ಹೋದ ಅನಿಲ್, ಆನಂತರ ಬೆಂಗಳೂರಿಗೆ ಬಂದು ಟೀ ವ್ಯಾಪಾರ ಶುರು ಮಾಡಿದರು.

ಅಲ್ಲಿಂದ ವಿವಿಧೆಡೆಗೆ ಸೈಕಲ್‌ನಲ್ಲಿ ಟೀ ಕ್ಯಾಟರಿಂಗ್, ರಿಯಲ್ ಎಸ್ಟೇಟ್ ಆರಂಭಿಸಿ ಯಶಸ್ಸು ಕಂಡವರು. ಕಾಂಗ್ರೆಸ್‌ನಿಂದ ಸ್ಪರ್ಧಿಸಲು ಬಯಸಿದ್ದರೂ ಅವರಿಗೆ ಟಿಕೆಟ್ ಸಿಗಲಿಲ್ಲ. ಹೀಗಾಗಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದೇನೆ ಎಂದು ಹೇಳಿಕೊಂಡಿದ್ದಾರೆ. (ಎನ್.ಬಿ)

Leave a Reply

comments

Related Articles

error: