Uncategorized

ಮತದಾನ ಜಾಗೃತಿಗಾಗಿ ಕಾಲ್ನಡಿಗೆ ಜಾಥಾ

ಮೈಸೂರು,ಏ.19 : ದೀಶಾ ಫೌಂಡೇಶನ್, ಎಡಿಆರ್ (ಅಸೋಸಿಯಷನ್ ಫಾರ್ ಡೆಮಾಕ್ರೆಟಿಕ್ ರಿಫಾರ್ಮ್ಸ್) ವತಿಯಿಂದ ಮತದಾನ ಜಾಗೃತಿಗಾಗಿ ನಡೆಸುತ್ತಿರುವ ಕಾಲ್ನಡಿಗೆ ಜಾಥಾವನ್ನು ಏ.20ರಂದು ಚಾಮುಂಡೇಶ್ವರಿ ಕ್ಷೇತ್ರದ ಹೂಟಗಳ್ಳಿ ಕೆ.ಇ.ಬಿ ಕಚೇರಿಯಿಂದ ಆರಂಭಿಸಿ ಸರಸ್ವತಿ ಕನ್ವೆನ್ಸ್ ಹಾಲ್ ಮೂಲಕ ಸಾಗಿ ಹೂಟಗಳ್ಳಿ ಸಿಗ್ನಲ್ ನಲ್ಲಿ ಮುಕ್ತಾಯಗೊಳಿಸಲಿದೆ.

ಕಾರ್ಯಕ್ರಮಕ್ಕೆ ಕೆ.ಆರ್.ನಗರದ ತಾಲ್ಲೂಕು ಪಂಚಾಯತ್ ಇ.ಒ. ಡಾ.ಲಕ್ಷ್ಮೀ ಮೋಹನ್ ಚಾಲನೆ ನೀಡುವರು.

ಯುವಕರಿಗೆ ಕಡ್ಡಾಯ ಮತದಾನ, ಅದರ ಪ್ರಾಮುಖ್ಯತೆ, ಭಾಗವಹಿಸುವಿಕೆಯನ್ನು ಕರಪತ್ರಗಳ ಮೂಲಕ ತಿಳುವಳಿಕೆ ನೀಡಲಾಗುವುದು ಎಂದು ವ್ಯವಸ್ಥಾಪಕ ಡಾ.ಎಂ.ಆರ್.ಸೀತಾರಾಂ ಹೇಳಿಕೆಯಲ್ಲಿ ತಿಳಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: