ಕರ್ನಾಟಕ

ಅಕ್ರಮ ಮರಳು ಸಾಗಾಟ : ಮರಳು ಸಮೇತ ವಾಹನ ವಶ

ರಾಜ್ಯ(ಮಡಿಕೇರಿ)ಏ.19:- ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ವಾಹನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಚಾಲಕ ರಾಜುವನ್ನು ಬಂಧಿಸಲಾಗಿದೆ.

ಸೋಮವಾರಪೇಟೆ ಕಲ್ಕಂದೂರು ಗ್ರಾಮದ ನಾಗೇಶ್ ಎಂಬವರಿಗೆ ಸೇರಿದ ಕ್ಯಾಂಟರ್‍ನಲ್ಲಿ ಗುರುವಾರ ಬೆಳಗ್ಗಿನ ಜಾವ 3.30 ಸಮಯದಲ್ಲಿ ಮರಳು ಸಾಗಾಟವಾಗುತ್ತಿದ್ದ ಸಂದರ್ಭ ತೋಳೂರುಶೆಟ್ಟಳ್ಳಿ ಗ್ರಾಮದ ಮುಖ್ಯ ರಸ್ತೆಯ ಬಳಿ, ವಾಹನವನ್ನು ವಶಕ್ಕೆ ಪಡೆಯಲಾಗಿದೆ. ಪಟ್ಟಣದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಾಲೀಕ ಹಾಗು ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದೆ. ಆರೋಪಿಯ ಕಾರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಕಾರ್ಯಾಚರಣೆಯಲ್ಲಿ ಡಿವೈಎಸ್‍ಪಿ ಶ್ರೀನಿವಾಸಮೂರ್ತಿ, ವೃತ್ತನಿರೀಕ್ಷ ನಂಜುಂಡೇಗೌಡ, ಹಾಗು ಸಿಬ್ಬಂದಿಗಳು ಪಾಲ್ಗೊಂಡಿದ್ದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: