ಸುದ್ದಿ ಸಂಕ್ಷಿಪ್ತ

ವರ್ತಕರು GSTIN ಗಳಿರುವ ಬಿಲ್ಲು ನೀಡಿ

ಮೈಸೂರು, ಏ.20:- ಕರ್ನಾಟಕ ಸಾರ್ವತ್ರಿಕ ವಿಧಾನಸಭೆ ಚುನಾವಣೆ -2018 ರ ಸಂಬಂಧವಾಗಿ ಚುನಾವಣಾ ಪ್ರಕ್ರಿಯೆಗಳನ್ನು ಮುಕ್ತ, ಪಾರದರ್ಶಕ ಮತ್ತು ನ್ಯಾಯೋಚಿತವಾಗಿ ಜರುಗಿಸುವ ಕುರಿತು ಚುನಾವಣಾ ಮಾದರಿ ಸಂಹಿತೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಅಗತ್ಯವಿದೆ.
ಮೈಸೂರು ವಲಯದ 4 ಜಿಲ್ಲೆಗಳ ಎಲ್ಲಾ ವರ್ತಕರು ತಾವು ವಿಕ್ರಿ ಮಾಡಿದ  ಎಲ್ಲಾ ಸರಕು ಮತ್ತು ಸೇವೆಗಳಿಗೆ GSTINಗಳಿರುವ ಬಿಲ್ಲುಗಳನ್ನು ನೀಡುವುದು ಕಡ್ಡಾಯವಾಗಿದೆ ಹಾಗೂ ಗ್ರಾಹಕರೂ ಕೂಡ ತಾವು ಖರೀದಿಸಿದ ವಸ್ತುಗಳಿಗೆ GSTIN ಬಿಲ್ಲುಗಳನ್ನು ಕೇಳಿ ಪಡೆದುಕೊಳ್ಳಲು ತಿಳಿಸಲಾಗಿದೆ.  (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: