ಮೈಸೂರು

ಜೂಜಾಡುತ್ತಿದ್ದ 9 ಜನರ ಬಂಧನ. 22,060 ರೂ. ವಶ

ಮೈಸೂರು,ಏ.20:- ಮೈಸೂರು ನಗರ ಸಿ.ಸಿ.ಬಿ. ಮತ್ತು ಲಷ್ಕರ್ ಪೊಲೀಸರು ಲಷ್ಕರ್ ಪೊಲೀಸ್ ಠಾಣಾ ವ್ಯಾಪ್ತಿಯ ಲಷ್ಕರ್ ಮೊಹಲ್ಲಾ, ವೀರನಗೆರೆಯ ಶ್ರೀ.ಅಂಜನೇಯ ದೇವಸ್ಥಾನ ಬಳಿ ಹಣವನ್ನು ಪಣವಾಗಿ ಕಟ್ಟಿಕೊಂಡು ಅಂದರ್ ಬಾಹರ್ ಇಸ್ಪೀಟ್ ಜೂಜಾಟ ಆಡುತ್ತಿದ್ದ 9 ಮಂದಿಯನ್ನು ಬಂಧಿಸಿದ್ದಾರೆ.

ಬಂಧಿತರನ್ನು ರಾಮಚಂದ್ರ ಬಿನ್ ಮಹದೇವ(32) ವೀರನಗೆರೆ, ಶಿವಕುಮಾರ ಬಿನ್ ಮಂಚಯ್ಯ, (38) ವೀರನಗೆರೆ, ಸುರೇಶ್ ಬಿನ್ ಮಹದೇವನಾಯ್ಕ, (40), ವೀರನಗೆರೆ, ಸುರೇಶ್ ಬಿನ್ ತಿಮ್ಮಣ್ಣ, (40) ವೀರನಗೆರೆ, ಹರೀಶ್ ಬಿನ್ ಮಹದೇವ( 32), ವೀರನಗೆರೆ, ರಾಜ ಬಿನ್ ಹನುಮಂತು, (32) ವೀರನಗೆರೆ, ಚೆಲುವರಾಜು ಬಿನ್ ನಾಗರಾಜು, (40) ಕೆಸರೆ, ಸಿದ್ದು ಬಿನ್ ಲೇ: ಮಂಚನಾಯ್ಕ, (40) ವೀರನಗೆರೆ, ಮುಕ್ತರ್ ಬಿನ್ ವಜೀರ್ ಅಹಮದ್ (27), ಲಷ್ಕರ್ ಮೊಹಲ್ಲಾ, ಎಂಬುವವರುಗಳನ್ನು ದಸ್ತಗಿರಿ ಮಾಡಿ ಜೂಜಾಟಕ್ಕೆ ಬಳಸುತ್ತಿದ್ದ 22,060ರೂ.ನಗದನ್ನು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಲಷ್ಕರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ದಾಳಿ ಕಾರ್ಯವನ್ನು ಮೈಸೂರು ನಗರದ ಅಪರಾಧ ವಿಭಾಗದ ಡಿ.ಸಿ.ಪಿ. ಮಹಾನಿಂಗ ಬಿ ನಂದಗಾಂವಿ ಅವರ ಮಾರ್ಗದರ್ಶನದಲ್ಲಿ ಸಿ.ಸಿ.ಬಿ.ಯ ಎ.ಸಿ.ಪಿ.  ಬಿ.ಆರ್. ಲಿಂಗಪ್ಪರವರ  ನೇತೃತ್ವದಲ್ಲಿ ಸಿ.ಸಿ.ಬಿ. ಪೊಲೀಸ್ ಇನ್ಸ್‍ಪೆಕ್ಟರ್ ಕೃಷ್ಣಪ್ಪ, ಎನ್.ಜಿ. ಮತ್ತು ಲಷ್ಕರ್ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‍ಪೆಕ್ಟರ್ ಸಂತೋಷ್, ಸಿ.ಸಿ.ಬಿ.ಯ ಎ.ಎಸ್.ಐ.ಗಳಾದ  ಎಲ್.ಸುಭಾಷ ಚಂದ್ರ, ಆರ್.ರಾಜು, ಅಲೆಕ್ಸಾಂಡರ್ ಸಿಬ್ಬಂದಿಗಳಾದ, ಯಾಕೂಬ್‍ಷರೀಪ್, ಶಿವರಾಜು, ಅರುಣ್ ಕುಮಾರ್, ಪುನೀತ್, ನಾಗೇಶ್, ರಘು,  ರಾಜೇಶ್ ತಂಡ ನಡೆಸಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: