ಮೈಸೂರು

ಸಾಂಪ್ರದಾಯಿಕ ಸಾಂಸ್ಕೃತಿಕ ಉತ್ಸವ

ಮೈಸೂರು,ಏ.20:-  ಶ್ರೀ ನಟರಾಜ ಮಹಿಳಾ ವಸತಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕೌಸ್ತುಭ ಸಾಂಸ್ಕೃತಿಕ  ವೇದಿಕೆಯ ವತಿಯಿಂದ ಸಾಂಪ್ರದಾಯಿಕ ಸಾಂಸ್ಕೃತಿಕ ಉತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ನಿನ್ನೆ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ನೃತ್ಯಾಲಯ ಟ್ರಸ್ಟ್ ಅಧ್ಯಕ್ಷ  ಡಾ. ತುಳಸಿ ರಾಮಚಂದ್ರ ಮಾತನಾಡಿ  “ಹೆಣ್ಣು ಸಂಸ್ಕೃತಿಯ ಕಣ್ಣು, ಹೆಣ್ಣು ಸಂಸ್ಕೃತಿಯ ಪ್ರತಿಬಿಂಬ, ಜಗತ್ತಿನಲ್ಲಿ ಯಾರು ಹೆಣ್ಣನ್ನು ಗೌರವಿಸುತ್ತಾರೋ ಅಂತಹ ವ್ಯಕ್ತಿಯನ್ನು ಇಡೀ ಸಮಾಜವೇ ಗೌರವಿಸುತ್ತದೆ.  ನಾವು ಎಷ್ಟೇ ವೈಜ್ಞಾನಿಕವಾಗಿ ಮುಂದುವರಿದರೂ ನಮ್ಮಲ್ಲಿ ಸಂಸ್ಕೃತಿ ಚಿಂತನ ಇರಬೇಕು.

ಮೈಸೂರನ್ನು ಸಾಂಸ್ಕೃತಿಕ ನಗರಿ ಎಂದೇ ಕರೆಯುತ್ತಾರೆ.  ಇಂದು ವಿವಿಧ ರಾಜ್ಯದ ಸಂಸ್ಕೃತಿಯನ್ನು ಪ್ರತಿಬಿಂಬಿಸುವಂತಹ ಉಡುಗೆ ತೊಡುಗೆಯನ್ನು ತೊಟ್ಟು ಸಂಭ್ರಮಿಸುತ್ತಿರುವುದು ವೈಶಿಷ್ಟ್ಯಪೂರ್ಣವಾಗಿದೆ” ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು  ಪ್ರಾಂಶುಪಾಲರಾದ ಡಾ. ಎಂ. ಶಾರದ ವಹಿಸಿದ್ದರು.  ವೇದಿಕೆಯಲ್ಲಿ ಸಾಂಸ್ಕೃತಿಕ ವೇದಿಕೆ  ಸಂಚಾಲಕರಾ ಶ್ವೇತಶ್ರಿ ಎ. ಮತ್ತಿತರರು ಉಪಸ್ಥಿತರಿದ್ದರು.

ವಿದ್ಯಾರ್ಥಿನಿಯರಿಗೆ ಏರ್ಪಡಿಸಿದ್ದ ಕ್ಯಾಟ್ ವಾಕ್ ಸ್ಪರ್ಧೆಯಲ್ಲಿ ಮಿಸ್ ನಟರಾಜ ಆಗಿ  ಕಿರೀಟ ಧರಿಸಿದವರಲ್ಲಿ ವನಿತಾ.,  ಪ್ರಥಮ ಬಿ.ಕಾಂ., ಪ್ರಥಮ ಸ್ಥಾನ, ಸಂಗೀತ ಸಿ.ವಿ., ಪ್ರಥಮ ಬಿ.ಕಾಂ.,  ದ್ವಿತೀಯ ಸ್ಥಾನ, ರೋಜಾಮಣಿ., ತೃತೀಯ ಬಿ.ಕಾಂ.,  ತೃತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ.

ವಿವಿಧ ರಾಜ್ಯದ ಸಂಸ್ಕೃತಿಯನ್ನು ಪ್ರತಿನಿಧಿಸುವ ನೃತ್ಯ ಸ್ಪರ್ಧೆಯಲ್ಲಿ ಭಾಗವಹಿಸಿ ನಗದು ಬಹುಮಾನ ಮತ್ತು  ಪ್ರಮಾಣ ಪತ್ರದೊಂದಿಗೆ ನೆನಪಿನ ಕಾಣಿಕೆಯನ್ನು ದ್ವಿತೀಯ ಬಿ.ಕಾಂ. ಎ ವಿಭಾಗ ಪ್ರಥಮ ಸ್ಥಾನ,ತೃತೀಯ ಬಿ.ಕಾಂ. ಬಿ ವಿಭಾಗ ದ್ವಿತೀಯ ಸ್ಥಾನ, ತೃತೀಯ ಬಿ.ಕಾಂ. ಎ ವಿಭಾಗ ತೃತೀಯ ಸ್ಥಾನವನ್ನು ಪಡೆದುಕೊಂಡಿದೆ. (ಎಸ್.ಎಚ್)

Leave a Reply

comments

Related Articles

error: