ಮೈಸೂರು

ಮಕ್ಕಳು ಪ್ರಶ್ನಿಸುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು : ಆರ್.ಸೂರ್ಯನಾರಾಯಣ್

ಮೈಸೂರು,ಏ.20:- ಮಕ್ಕಳು ಪ್ರಶ್ನಿಸುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದು ರೋಟರಿ ವೆಸ್ಟ್ ವಿದ್ಯಾಸಂಸ್ಥೆಯ ಖಜಾಂಚಿ ಆರ್.ಸೂರ್ಯನಾರಾಯಣ್ ತಿಳಿಸಿದರು.

ಸರಸ್ವತಿಪುರಂ ನ ರೋಟರಿ ವೆಸ್ಟ್ ವಿದ್ಯಾಸಂಸ್ಥೆ ಹಾಗೂ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು  ನಗರ ಘಟಕ ಸಂಯುಕ್ತಾಶ್ರಯದಲ್ಲಿ ರೋಟರಿ ವೆಸ್ಟ್ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿಂದು ನಡೆದ ವಿಜ್ಞಾನ ಶಿಬಿರದ ಉದ್ಘಾಟನಾ ಸಮಾರಂಭದ ಅಧ್ಯಕತೆ ವಹಿಸಿ ಮಾತನಾಡಿದರು. ಎಲ್ಲ ವಿಷಯಗಳು ಪಠ್ಯಪುಸ್ತಕದಲ್ಲಿ ಬರಲ್ಲ. ಇಂಥಹ ಸಮರ್ ಕ್ಯಾಂಪ್ ಗಳಿಂದ ಹಲವು ವಿಷಯಗಳನ್ನು ಕಲಿಯಬಹುದು. ಈ ಒಂದು ವಾರ ನಿಮಗೆ ಹೆಚ್ಚು ಮಾಹಿತಿ ಪಡೆಯಲು ಸಾಧ್ಯವಾಗಲಿದೆ. ಮಕ್ಕಳು ಪ್ರಶ್ನೆಕೇಳುವ ಮನೋಭಾವವನ್ನು ಬೆಳೆಸಿಕೊಳ್ಳಿ. ಕ್ಲಾಸ್ ರೂಂ ನಲ್ಲಿಯೂ ಕೂಡ ನಿಮ್ಮ ಶಿಕ್ಷಕರುಗಳ ಬಳಿ ಪ್ರಶ್ನೆ ಕೇಳಿ ತಿಳಿದುಕೊಳ್ಳಿ. ದಿನಕ್ಕೆ ಒಂದು ಪ್ರಶ್ನೆಯನ್ನಾದರೂ ಕೇಳಿ, ಸಿಲ್ಲಿ ಪ್ರಶ್ನೆಯಾಗಿದ್ದರೂ ಪರವಾಗಿಲ್ಲ, ಇಂಟರ್ ನೆಟ್ ಕೂಡ ಹಲವು ಮಾಹಿತಿಗಳನ್ನು ನೀಡಲಿದ್ದು, ಅದರಲ್ಲಿರುವ ಉಪಯುಕ್ತ ಮಾಹಿತಿಗಳನಷ್ಟೇ ಪಡೆದು ಜ್ಞಾನ ವೃದ್ಧಿಸಿಕೊಳ್ಳಿ.ಸ್ಮರಣ ಶಕ್ತಿ ಹೆಚ್ಚಿಸಿಕೊಳ್ಳಿ. ಎಷ್ಟೇ ದೊಡ್ಡ ವ್ಯಕ್ತಿಯಾದರೂ ಸಿಂಪ್ಲಿಸಿಟಿ ಬಹಳ ಮುಖ್ಯ ಎಂದು ತಿಳಿಸಿದರು.

ಕಾರ್ಯಕ್ರಮವನ್ನು ಸಿಎಫ್ ಟಿಆರ್ ಐ ನಿವೃತ್ತ ವಿಜ್ಞಾನಿ ಹರಿಪ್ರಸಾದ್ ಉದ್ಘಾಟಿಸಿದರು. ಜೈವಿಕ ತಂತ್ರಜ್ಞಾನ ವಿಭಾಗದ ಪ್ರಾಧ್ಯಾಪಕ ಡಾ.ಉಮೇಶ್,ಕರ್ನಾಟಕ ವಿಜ್ಞಾನ ಪರಿಷತ್ ಸಂಚಾಲಕ ಆರ್.ಅನಂತರಾಮು ಮತ್ತಿತರರು ಉಪಸ್ಥಿತರಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: