
ಕರ್ನಾಟಕ
ಈಜಲು ಹೋದ ಮೂವರು ಬಾಲಕರು ನೀರುಪಾಲು!
ಚಿತ್ರದುರ್ಗ,ಏ.20: ಈಜಲು ಹೋದ ಮೂವರು ಬಾಲಕರು ಸಾವನ್ನಪ್ಪಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಸಿರಿಗೆರೆ ತರಳುಬಾಳು ಗುರುಪೀಠ ಶಾಂತಿ ವನದಲ್ಲಿರುವ ರೋಚೆಕ್ ಚೆಕ್ ಡ್ಯಾಂನಲ್ಲಿ ನಡೆದಿದೆ.
ದರ್ಶನ್(12), ಶಿವರಾಜ್(15) ಮತ್ತು ಆಕಾಶ್(15) ಮೃತ ದುರ್ದೈವಿಗಳು. ಬಾಲಕರು ಬೇಸಿಗೆ ಶಿಬಿರಕ್ಕೆ ಬಂದಿದ್ದು, ಚೆಕ್ ಡ್ಯಾಂನಲ್ಲಿ ಮುಳಗಿ ಸಾವನ್ನಪ್ಪಿದ್ದಾರೆ. ಈ ಘಟನೆ ಭರಮಸಾಗರ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.(ವರದಿ; ಪಿ.ಎಸ್ )