ಕರ್ನಾಟಕಪ್ರಮುಖ ಸುದ್ದಿಮೈಸೂರು

ಸಚಿವ ಮಹದೇವಪ್ಪ ಆಪ್ತನ ಮನೆಯ ಮೇಲೆ ಐಟಿ ದಾಳಿ: 2000 ಮುಖಬೆಲೆಯ ಕೋಟ್ಯಾಂತರ ರೂ.ಪತ್ತೆ

ಲೋಕೋಪಯೋಗಿ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಡಾ.ಹೆಚ್.ಸಿ.ಮಹದೇವಪ್ಪ ಅವರ ಆಪ್ತ ಜಯಚಂದ್ರ ಅವರ ನಿವಾಸದ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ದಾಳಿಯಲ್ಲಿ ಅಧಿಕಾರಿಗಳಿಗೆ 2000. ಮುಖಬೆಲೆಯ ಕೋಟ್ಯಾಂತರ ರೂ. ಸಿಕ್ಕ ಕುರಿತು ಮಾಹಿತಿ ಬಲ್ಲ ಮೂಲಗಳಿಂದ ಲಭ್ಯವಾಗಿದೆ.

ಬೆಂಗಳೂರಿನ ಸಂಜಯನಗರದಲ್ಲಿರುವ ಜಯಚಂದ್ರ ಅವರ ಮನೆ ಮೇಲೆ ದಾಳಿ ನಡೆಸಿರುವ ಐಟಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಚೀಫ್ ಪ್ರಾಜೆಕ್ಟ್ ಆಫೀಸರ್ ಆಗಿರುವ ಜಯಚಂದ್ರ ಅವರು  ನಗದು ಪಾವತಿಸಿ 2 ಇಂಪೋರ್ಟೆಡ್ ಕಾರು ಮತ್ತು ಒಂದು ಬೈಕ್ ಖರೀದಿಸಿದ್ದ ಹಿನ್ನೆಲೆಯಲ್ಲಿ ತೆರಿಗೆ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದರು. ದಾಳಿಯ ವೇಳೆ ಎಲ್ಲವೂ 2000 ಮುಖಬೆಲೆಯ ಹೊಸ ನೋಟುಗಳೇ ಪತ್ತೆಯಾಗಿವೆ ಎಂದು ತಿಳಿದುಬಂದಿದೆ.

Leave a Reply

comments

Related Articles

error: