ಕರ್ನಾಟಕ

ರಾಷ್ಟ್ರೀಯ ಪಕ್ಷಗಳು ದಲಿತರ ಹಿತಕಾಯುವಲ್ಲಿ ವಿಫಲವಾಗಿದೆ : ಎಂ.ಡಿ.ದೇವರಾಜಯ್ಯ

ರಾಜ್ಯ(ಮಡಿಕೇರಿ)ಏ.21:- ರಾಷ್ಟ್ರೀಯ ಪಕ್ಷಗಳು ದಲಿತರ ಹಿತಕಾಯುವಲ್ಲಿ ವಿಫಲವಾಗಿದೆ. ಪ್ರಾದೇಶಿಕ ಪಕ್ಷಗಳಿಂದ ಮಾತ್ರ ದಲಿತರ ಉದ್ಧಾರ ಸಾಧ್ಯ. ಈ ನಿಟ್ಟಿನಲ್ಲಿ ಜೆಡಿಎಸ್ ಮತ ನೀಡಬೇಕೆಂದು ಮಡಿಕೇರಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಪರಿಶಿಷ್ಟಜಾತಿ ಘಟಕದ ಅಧ್ಯಕ್ಷ ಎಂ.ಡಿ.ದೇವರಾಜಯ್ಯ ಮನವಿ ಮಾಡಿದ್ದಾರೆ.

ರಾಜ್ಯದ ಅಭಿವೃದ್ಧಿಗಿಂತ, ಇಲ್ಲಿನ ಸಂಪತ್ತನ್ನು ಪಡೆಯುವ ಕೆಲಸವನ್ನು ರಾಷ್ಟೀಯ ಪಕ್ಷಗಳು ಮಾಡುತ್ತಿವೆ. ದೀನ ದಲಿತರು, ಅಲ್ಪಸಂಖ್ಯಾತರು, ಹಿಂದುಳಿದ ಜನಾಂಗದವರು, ಬಡವರು, ಅನೇಕ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ಪ್ರಾದೇಶಿಕ ಪಕ್ಷವಾದ ಜೆಡಿಎಸ್ ಅಧಿಕಾರಕ್ಕೆ ಬಂದರೆ, ಸ್ಥಳೀಯವಾಗಿ ಯೋಜನೆಗಳು ರೂಪುಗೊಳ್ಳುತ್ತವೆ ಎಂದು ಗೋಷ್ಠಿಯಲ್ಲಿ ಅಭಿಪ್ರಾಯಿಸಿದರು.

ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳ ಆಯ್ಕೆಯಲ್ಲಿ ಇನ್ನು ಗೊಂದಲ ಮುಗಿದಿಲ್ಲ ಆದರೆ, ಜೆಡಿಎಸ್‍ನಲ್ಲಿ 6 ತಿಂಗಳ ಮೊದಲೆ ಜಿಲ್ಲೆಯ ಎರಡು ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಘೋಷಣೆಯಾಗಿದೆ. ಮಡಿಕೇರಿ ಕ್ಷೇತ್ರ ವ್ಯಾಪ್ತಿಯಲ್ಲಿ ಮಾಜಿ ಸಚಿವರಾದ ಜೀವಿಜಯ ಅವರು ತಮ್ಮ ಅಧಿಕಾರ ಅವಧಿಯಲ್ಲಿ ಉತ್ತಮ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಜೀವಿಜಯ ಅವರು ಶಾಸಕರಾಗಿದ್ದ ಸಂದರ್ಭ ಪಟ್ಟಣದಲ್ಲಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಶತಮಾನೋತ್ಸವ ನೆನಪಿಗಾಗಿ ಒಂದೂವರೆ ಕೋಟಿ ರೂ. ವೆಚ್ಚದಲ್ಲಿ ಶತಮಾನೋತ್ಸವ ಭವನ ಕಟ್ಟಲು ಕಾಮಗಾರಿ ಪ್ರಾರಂಭಿಸಲಾಗಿದ್ದು, ನಂತರ ಕಾಮಗಾರಿ ಅರ್ಧಕ್ಕೆ ನಿಂತಿದೆ. ಈಗ ಜೀವಿಜಯ ಗೆಲವು ಸಾಧಿಸಿದರೆ, ಸಾರ್ವಜನಿಕರಿಗೆ ಉಪಯೋಗವಾಗುವ ಭವ್ಯ ಭವನ ನಿರ್ಮಾಣವಾಗಲಿದೆ ಎಂದರು.

ಪಟ್ಟಣದಲ್ಲಿ ಕ್ಷೇತ್ರ ವ್ಯಾಪ್ತಿಯ ದಲಿತ ಬಾಂಧವರು ಜೀವಿಜಯ ಅವರ ಅಭಿವೃದ್ಧಿ ಕಾರ್ಯಕ್ರಮಗಳನ್ನು ಗುರುತಿಸಿ ಮತ ನೀಡಬೇಕು. ಜಾತ್ಯಾತೀತ ಮನೋಭಾವನೆಯುಳ್ಳ ನಾಯಕರು ಮಾತ್ರ ಸುಭದ್ರ ಆಡಳಿತ ನೀಡಲು ಸಾಧ್ಯ ಎಂದು ಹೇಳಿದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: