ಕರ್ನಾಟಕ

ಅಕ್ರಮವಾಗಿ ಮರಳು ಸಾಗಾಟ : ಇಬ್ಬರ ಬಂಧನ

ರಾಜ್ಯ(ಮಡಿಕೇರಿ)ಏ.21:- ಅಕ್ರಮವಾಗಿ ಮರಳು ಸಾಗಾಟಕ್ಕೆ ಸಂಬಂಧಪಟ್ಟಂತೆ ಇಬ್ಬರನ್ನು ಡಿವೈಎಸ್‍ಪಿ ನೇತೃತ್ವದ ತಂಡ ಬಂಧಿಸಿದೆ.

ಕಲ್ಕಂದೂರು ಗ್ರಾಮದ ಕ್ಯಾಂಟರ್ ಮಾಲೀಕ ಕೆ.ಟಿ.ಸುರೇಶ್, ಕ್ಲೀನರ್ ಕಾರ್ತಿಕ್ ಬಂಧಿತ ಆರೋಪಿಗಳು. ಚಾಲಕ ರಮೇಶ್ ಪರಾರಿಯಾಗಿದ್ದಾನೆ. ಮರಳು ಸಾಗಾಟದ ಸಂದರ್ಭ ಬೆಂಗಾವಲಿಗಿದ್ದ ಸ್ವಿಫ್ಟ್ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಧೀಶರು ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದಾರೆ.

ಸಕಲೇಶಪುರ ತಾಲೂಕಿನ ಯಸಳೂರು, ಗೊದ್ದು ಹಾಗು ತಾಲೂಕಿನ ಕೂತಿ, ತೋಳೂರುಶೆಟ್ಟಳ್ಳಿ ಮಾರ್ಗವಾಗಿ ಮಧ್ಯರಾತ್ರಿ ಹಾಗು ನಸುಕಿನ ಸಮಯದಲ್ಲಿ ಅಕ್ರಮ ಮರಳು ಸಾಗಾಟ ನಡೆಯುತ್ತಿರುವ ಬಗ್ಗೆ ಮಾಹಿತಿ ಸಂಗ್ರಹಿಸಿದ ಕುಶಾಲನಗರ ಡಿವೈಎಸ್‍ಪಿ ಶ್ರೀನಿವಾಸಮೂರ್ತಿ ನೇತೃತ್ವದ ತಂಡ ಗುರುವಾರ ಬೆಳಗ್ಗಿನ ಜಾವ 3.30 ಸಮಯದಲ್ಲಿ ತೋಳೂರುಶೆಟ್ಟಳ್ಳಿ ಜಂಕ್ಷನ್ ಬಳಿ ಮರಳು ತುಂಬಿದ ಕ್ಯಾಂಟರ್‍ನ್ನು ವಶಪಡಿಸಿಕೊಂಡಿದ್ದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: