ಕರ್ನಾಟಕ

ಮುನಿಶ್ವರ ಮತ್ತು ಶ್ರೀಚಾಮುಂಡೇಶ್ವರಿ ಪ್ರತಿಷ್ಠಾಪನೆ

ರಾಜ್ಯ(ಮಡಿಕೇರಿ)ಏ.21:- ಸೋಮವಾರಪೇಟೆ ಪಟ್ಟಣದ ಮಹದೇಶ್ವರ ಬ್ಲಾಕ್‍ನ ಶ್ರೀ ಮಹದೇಶ್ವರಸ್ವಾಮಿ ಭಕ್ತ ವೃಂದದಿಂದ ದೇವರ ಬನದಲ್ಲಿ ಶ್ರೀ ಮುನಿಶ್ವರ ಮತ್ತು ಶ್ರೀಚಾಮುಂಡೇಶ್ವರಿ ಪ್ರತಿಷ್ಠಾಪನೆ ನೆರವೇರಿತು.

ಆರ್ಚಕ ಜಗದೀಶ್ ಉಡುಪ ಅವರ ನೇತೃತ್ವದಲ್ಲಿ ಗಣಪತಿ ಹೋಮ, ಪ್ರತಿಷ್ಠಾಹೋಮ, ಮಹಾಪೂಜೆ, ಭಗವತಿ ಸೇವೆ, ಪಂಚ ದುರ್ಗಾದೀಪ ನಮಸ್ಕಾರ ನೆರವೇರಿತು. ನಂತರ ಭಕ್ತಾದಿಗಳಿಗೆ ಅನ್ನದಾಸೋಹ ನಡೆಯಿತು.

ಮಹದೇಶ್ವರಸ್ವಾಮಿ ಭಕ್ತ ವೃಂದದ ಅಧ್ಯಕ್ಷ ಎಸ್.ಆರ್.ರಾಜು, ಉಪಾಧ್ಯಕ್ಷ ಬಿ.ಕೆ.ದೊರೆ, ಪದಾಧಿಕಾರಿಗಳಾದ ಗೋವಿಂದ, ದಯಾನಂದ, ಪ್ರಶಾಂತ್, ಜೋಯಪ್ಪ, ಸುರೇಶ್, ಬಿ.ಬಿ.ಮೋಹನ್, ಬಿ.ಟಿ.ತಿಮ್ಮಶೆಟ್ಟಿ ಇದ್ದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: