ಪ್ರಮುಖ ಸುದ್ದಿ

ಕಾಗೋಡು ಬೆಂಬಲಿಸಲು ಮುಂದಾದ ಬೇಳೂರು ಗೋಪಾಲಕೃಷ್ಣ

ರಾಜ್ಯ(ಶಿವಮೊಗ್ಗ)ಏ.21:- ಬಿಜೆಪಿ ಟಿಕೇಟ್ ಸಿಗದೇ ನಿರಾಶೆ ಹೊಂದಿದ ಬೇಳೂರು ಗೋಪಾಲಕೃಷ್ಣ ಕಾಂಗ್ರೆಸ್ ಸೇರಲು ಸಿದ್ಧವಾಗಿದ್ದಾರೆ.

ಸೋದರ ಮಾವ ಕಾಗೋಡು ತಿಮ್ಮಪ್ಪನವರನ್ನು ಬೆಂಬಲಿಸಲು ಮುಂದಾಗಿದ್ದು, ಹಾಲಪ್ಪನವರನ್ನು ಸೋಲಿಸಲು ಶಪಥ ಮಾಡಿದ್ದಾರೆ. ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜೊತೆ ಮಾತುಕತೆ ನಡೆಸಲಿರುವ ಬೇಳೂರು ಸಾಗರದಲ್ಲೇ ರಾಜಕೀಯ ನೆಲೆಯನ್ನು ಭದ್ರಗೊಳಿಸಲು ಯೋಜನೆ ರೂಪಿಸುತ್ತಿದ್ದಾರೆ ಎನ್ನಲಾಗಿದೆ. ಸೋದರ ಮಾವ ಕಾಗೋಡು ತಿಮ್ಮಪ್ಪನವರ ಪರ ಪ್ರಚಾರ ನಡೆಸಿ ಅವರ ಗೆಲುವಿಗೆ ಶ್ರಮಿಸಲಿದ್ದಾರೆ ಎನ್ನಲಾಗಿದೆ. ಅವರು ನಿಜಕ್ಕೂ ಕಾಂಗ್ರೆಸ್ ಸೇರಿ ಕಾಗೋಡು ಪರ ನಿಂತರೆ ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದು ಎನ್ನುವುದಕ್ಕೆ ಬೇಳೂರು ಅವರೇ ಉತ್ತಮ ಉದಾಹರಣೆಯಾಗಲಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: