ಮೈಸೂರು

ಲಂಚ ಸ್ವೀಕರಿಸುತ್ತಿದ್ದ ಪಾಲಿಕೆ ಸಿಬ್ಬಂದಿ ಎಸಿಬಿ ಬಲೆಗೆ

ಪಾಲಿಕೆಯ ತೋಟಗಾರಿಕೆ ವಿಭಾಗದ ಸಹಾಯಕ ನಿರ್ದೇಶಕ ರಾಘವೇಂದ್ರ ಹಾಗೂ ಪ್ರಥಮ ದರ್ಜೆ ಸಹಾಯಕ ಪುಟ್ಟಸ್ವಾಮಿ ಎಂಬುವರು ಲಂಚ ಸ್ವೀಕರಿಸುತ್ತಿದ್ದ ವೇಳೆ ಎಸಿಬಿ ಬಲೆಗೆ ಬಿದ್ದಿದ್ದಾರೆ.

ಗುರುವಾರದಂದು ಉದ್ಯಾನ ಕಾಮಗಾರಿಯ ಬಿಲ್ ಪಾವತಿಗೆ 35 ಸಾವಿರ ರೂ. ಲಂಚ ಪಡೆಯುತ್ತಿದ್ದ ಸಂದರ್ಭದಲ್ಲಿ ಭ್ರಷ್ಟಾಚಾರ ನಿಗ್ರಹ ದಳದ ಎಸ್‍ಪಿ ಬಿ.ಟಿ. ಕವಿತಾ ನೇತೃತ್ವದ ತಂಡ ದಾಳಿ ನಡೆಸಿತ್ತು.

ವಾರ್ಡ್ ಸಂಖ್ಯೆ 48ರ ಉದ್ಯಾನವೊಂದರ ಅಭಿವೃದ್ಧಿ ಕಾಮಗಾರಿಯ ಬಿಲ್ ಪಾವತಿಗೆ ಪಾಲಿಕೆ ಸಿಬ್ಬಂದಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಬೆಂಗಳೂರು ಮೂಲದ ಗುತ್ತಿಗೆದಾರ ರಾಜೇಶ್ ದೂರು ನೀಡಿದ್ದರು ಎಂದು ಎಸಿಬಿ ಎಸ್‍ಪಿ ಬಿ.ಟಿ. ಕವಿತಾ ತಿಳಿಸಿದ್ದಾರೆ.

ರಾಜೇಶ್ ಉದ್ಯಾನ ಅಭಿವೃದ್ಧಿ ಕಾಮಗಾರಿಯನ್ನು 10.45 ಲಕ್ಷಕ್ಕೆ ಗುತ್ತಿಗೆ ಪಡೆದಿದ್ದರು. 7 ತಿಂಗಳ ಹಿಂದೆ ಪೂರ್ಣಗೊಂಡ ಕಾಮಗಾರಿಯ ಬಿಲ್ ಪಾವತಿಗೆ ರಾಘವೇಂದ್ರ 70 ಸಾವಿರ ರೂ. ಬೇಡಿಕೆ ಇಟ್ಟಿದ್ದರು. ಇದನ್ನು ರಾಜೇಶ್ ಹಿರಿಯ ಅಧಿಕಾರಿಗಳ ಗಮನಕ್ಕೂ ತಂದಿದ್ದರು. ಆದರೂ, ಬಿಲ್ ಪಾವತಿಸಲು ಸಿಬ್ಬಂದಿ ವಿನಾ ಕಾರಣ ವಿಳಂಬ ಮಾಡುತ್ತಿದ್ದರು. ಹೀಗಾಗಿ, ಗುರುವಾರ ಬೆಳಗ್ಗೆ ಎಸಿಬಿ ಠಾಣೆಗೆ ದೂರು ನೀಡಿದ್ದರು.

Leave a Reply

comments

Related Articles

error: