ದೇಶಪ್ರಮುಖ ಸುದ್ದಿ

ಸಿಜೆಐ ಪದಚ್ಯುತಿ ನಿಲುವಳಿ ಕಾಂಗ್ರೆಸ್ ರಾಜಕೀಯ ದಾಳ: ಅರುಣ್ ಜೇಟ್ಲಿ ಟೀಕೆ

ನವದೆಹಲಿ (ಏ.21): ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರ ವಿರುದ್ಧ ಪದಚ್ಯುತಿ ನಿಲುವಳಿ ಮಂಡನೆಯನ್ನು ಕಾಂಗ್ರೆಸ್ ಪಕ್ಷ ರಾಜಕೀಯ ಅಸ್ತ್ರವಾಗಿ ಬಳಸಿಕೊಳ್ಳುತ್ತಿದೆ ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಆರೋಪಿಸಿದ್ದಾರೆ.

ತಮ್ಮ ಫೇಸ್’ಬುಕ್ ಪೋಸ್ಟ್’ನಲ್ಲಿ ಈ ಬಗ್ಗೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದು, ಸುಪ್ರೀಮ್’ಕೋರ್ಟ್’ನ ಮೂವರು ನ್ಯಾಯಾಧೀಶರನ್ನೊಳಗೊಂಡ ನ್ಯಾಯಪೀಠದ ಪರವಾಗಿ ನ್ಯಾಯಮೂರ್ತಿ ಲೋಯಾ ಸಾವು ಪ್ರಕರಣದಲ್ಲಿ 114 ಪುಟಗಳ ತೀರ್ಪು ಬರೆದಿರುವ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್, ಸಾರ್ವಜನಿಕ ಮತ್ತು ರಾಜಕೀಯ ಜೀವನದಲ್ಲಿ ತಪ್ಪುಗಳನ್ನು ಪ್ರಚಾರಮಾಡಲು ಪ್ರತಿಯೊಂದು ಹಂತದಲ್ಲಿಯೂ ಪಿತೂರಿ ನಡೆಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಅಮಿತ್ ಶಾ ಅವರ ಪಾತ್ರ ಸೊಹ್ರಬುದ್ದೀನ್ ಎನ್ ಕೌಂಟರ್ ಪ್ರಕರಣದಲ್ಲಿ ಇಲ್ಲ. ಇದು ಕೆಲವು ಕೇಂದ್ರ ಸಂಸ್ಥೆಗಳು ರಾಜ್ಯ ಪೊಲೀಸರೊಂದಿಗೆ ಸೇರಿ ನಡೆಸಿದ ಅಕ್ರಮ ಎನ್’ಕೌಂಟರ್ ಆಗಿದೆ ಎಂದು ದೂರಿದರು. ಕಾಂಗ್ರೆಸ್ ಮತ್ತು ಇತರ ಆರು ಪ್ರತಿಪಕ್ಷಗಳು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರ ವಿರುದ್ಧ ಪದಚ್ಯುತಿ ನಿಲುವಳಿ ಮಂಡನೆ ನಡೆಯನ್ನು ಉಲ್ಲೇಖಿಸಿದ ಅವರು, ಕಾಂಗ್ರೆಸ್ ಮತ್ತು ಅದರ ಮೈತ್ರಿಕೂಟಗಳು ಮುಖ್ಯ ನ್ಯಾಯಮೂರ್ತಿ ವಿರುದ್ಧ ಪದಚ್ಯುತಿಯನ್ನು ರಾಜಕೀಯ ಅಸ್ತ್ರವಾಗಿ ಬಳಸಿಕೊಂಡಿದೆ ಎಂದು ಟೀಕಿಸಿದ್ದಾರೆ.

ರಾಜಕೀಯ ಪಕ್ಷಗಳು ಪದಚ್ಯುತಿ ನಿಲುವಳಿ ಮಂಡನೆಯನ್ನು ಕ್ಷುಲ್ಲಕಗೊಳಿಸುವುದು ಅಪಾಯಕಾರಿಯಾಗಿದೆ. ಇದು ನ್ಯಾಯಾಧೀಶರನ್ನು ಬೆದರಿಸುವ ಪ್ರಯತ್ನವಾಗಿದ್ದು ನೀವು ನಮ್ಮೊಂದಿಗೆ ಹೊಂದಿಕೊಳ್ಳದಿದ್ದರೆ ನಿಮ್ಮ ವಿರುದ್ಧ ಸೇಡು ತೀರಿಸಿಕೊಳ್ಳಲು 50 ಸಂಸದರು ನಮ್ಮೊಂದಿಗಿದ್ದರೆ ಸಾಕು ಎಂಬ ಸಂದೇಶವನ್ನು ಕಳುಹಿಸುತ್ತದೆ ಎಂದು ಜೇಟ್ಲಿ ಒತ್ತಿ ಹೇಳಿದ್ದಾರೆ. (ಎನ್.ಬಿ)

Leave a Reply

comments

Related Articles

error: